ಬೆಂಗಳೂರು: ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕುಮಾರಿ ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೈಕಲ್ ನೀಡಲಾಯಿತು.
ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರಮಟ್ಟದ ಸ್ಲೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನ ಸಂದರ್ಭದಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು.
ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾಡಿದ್ದಾರೆ. ಸರ್ಕಾರದ ಅನುದಾನ ಪಡೆಯದೆ ದೇಣಿಗೆ ಪಡೆದು ಈ ಕಾರ್ಯವನ್ನು ಮಾಡಿರುವುದಾಗಿ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..