ದೊಡ್ಡಬಳ್ಳಾಪುರ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿದ ಪರಿಣಾಮ, ಹಲವರು ಗಾಯಗೊಂಡಿರುವ ಘಟನೆ ಬಾಶೆಟ್ಟಿಹಳ್ಳಿ ಸಮೀಪ ಸಂಭವಿಸಿದೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಇಂಡಿಗೋ ಬ್ಲೂ ಕಾರ್ಖಾನೆಯಿಂದ ಕಾರ್ಮಿಕರನ್ನು ಕರೆತರುವ ವೇಳೆ ಈ ಘಟನೆ ಸಂಭವಿಸಿದ್ದು, ಬಸ್ ಮುಂದಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ.
ನಿಯಂತ್ರಣ ತಪ್ಪಿ ಏಕಾಏಕಿ ಬಸ್ ನುಗ್ಗಿದ ಪರಿಣಾಮ ಬಸ್ಸಿನಲ್ಲಿದ್ದವರು ಹಾಗೂ ಬಸ್ಸಿನ ಮುಂಭಾಗದಲ್ಲಿದ್ದ ದ್ವಿಚಕ್ರ ವಾಹನ ಸವಾರರು ಸೇರಿ ಸುಮಾರು 15ಕ್ಕು ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆರೋಪ: ಬ್ರೇಕ್ ಫೇಲ್ ಕಾರಣ ಘಟನೆ ಸಂಭವಿಸಿದೆ ಎಂದು ಬಸ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕಾರ್ಖಾನೆಯಿಂದ ಕಾರ್ಮಿಕರ ಕರೆತರುವ ಎರಡು ಬಸ್ಸುಗಳ ಚಾಲಕರ ನಡುವಿನ ಸ್ಪರ್ಧೆಯಿಂದ ಈ ಅವಘಡ ಸಂಭವಿಸಿದೆ. ಚಾಲಕರ ಬೇಜವಬ್ದಾರಿಯುತ ಚಾಲನೆಯಿಂದ ಇಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಿವೆ ಎಂದು ಕರವೇ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ನಾಗೇಶ್ ಆರೋಪಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ತನಿಖೆಯ ನಂತರ ಕಾರಣ ತಿಳಿದು ಬರಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..