ಬೆಂಗಳೂರು: ಶಾಸಕ ಗೂಳಿಹಟ್ಟಿ ಚಂದ್ರಶೇಖರ್ ತನ್ನ ತಾಯಿಯೇ ಮತಾಂತರವಾಗಿದ್ದಾರೆಂದು, ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ. ಪತ್ರಿಕೆ, ಟಿವಿಯಲ್ಲಿ ಉಡುಪಿಯಲ್ಲಿ, ಚಿತ್ರದುರ್ಗದಲ್ಲಿ ಸಾಕಷ್ಟು ಮತಾಂತರವಾಗಿರುವ ಕುರಿತು ಪ್ರಕಟವಾಗಿದೆ. ನನ್ನ ಕ್ಷೇತ್ರದಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಮತಾಂತರವಾಗಿದ್ದಾರೆ ಎಂದರು.
ಕ್ರಿಶ್ಚಿಯನ್ಸ್ ನನ್ನ ತಾಯಿಯನ್ನು ಮತಾಂತರ ಮಾಡಿದ್ದಾರೆ ಎಂದು ಹೇಳಿದರು. ರೋಗಗಳು ಗುಣವಾಗುತ್ತದೆಂದು ಹೇಳಿ ಕ್ರಿಶ್ಚಿಯನ್ ಮಿಷನರಿಗಳು ಅಮಾಯಕರನ್ನು ಕರೆದುಕೊಂಡು ಹೋಗಿ ಮತಾಂತರ ಮಾಡುತ್ತಾರೆಂದು ಗಂಭೀರ ಆರೋಪ ಮಾಡಿದರು.
ಮನೆಯಲ್ಲಿ ದೇವರ ಫೋಟೊ ಇಡಬಾರದು, ಕುಂಕುಮ ಇಡಬಾರದೆಂದು ಬಿಂಬಿಸಿ ಕಳುಹಿಸುತ್ತಾರೆ. ನನ್ನ ತಾಯಿ ಮೊಬೈಲ್ ಫೋನಿನಲ್ಲೂ ಅವರದೇ ಗೀತೆಗಳನ್ನು ಇಟ್ಟುಕೊಂಡಿರುತ್ತಾರೆ, ಇದು ನಮಗೆ ಮುಜುಗರವಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ಎಂದು ಹೇಳಿದರು.
ಮತಾಂತರಕ್ಕೆ ದಲಿತರು, ಹಿಂದುಳಿದ ವರ್ಗ ಮತ್ತು ಮುಸ್ಲಿಮರು ಕೂಡ ಮತಾಂತರವಾಗುತ್ತಿದ್ದಾರೆ ಎಂದ ಅವರು ಇದನ್ನು ತಡೆಗಟ್ಟಲು ಕಾನೂನು ತರಬೇಕೆಂದು ಆಗ್ರಹಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….