ದೊಡ್ಡಬಳ್ಳಾಪುರ: ನಗರದ ದರ್ಗಾಜೋಗಹಳ್ಳಿಯಲ್ಲಿ ಹೃದಯವಂತ ಡಾ.ವಿಷ್ಣುವರ್ಧನ್ ಸಂಘದ ವತಿಯಿಂದ ನಡೆದ ನಟ ಡಾ.ವಿಷ್ಣುವರ್ಧನ್ 71ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ವಿಜಯೇಂದ್ರ ರಾವ್ ರವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, 1950 ಸೆಪ್ಟೆಂಬರ್ 18 ರಂದು ಜನಿಸಿದ ಸಂಪತ್ ಕುಮಾರ್ 1955 ರಲ್ಲಿ ಶಂಕರ್ ಸಿಂಗ್ ನಿರ್ಮಾಣದ ಭಕ್ತಿ ಪ್ರಧಾನ ಚಿತ್ರ ಶಿವಶರಣೆ ನಂಬೆಯಕ್ಕ ಎಂಬ ಚಿತ್ರದಲ್ಲಿ ಬಾಲನಟನಾಗಿ ಪ್ರವೇಶ ಮಾಡಿದ ನಂತರ, ಎಸ್.ಎಲ್.ಭೈರಪ್ಪ ರವರ ಕಾದಂಬರಿ ಆಧಾರಿತ ವಂಶವೃಕ್ಷ ಚಿತ್ರದಲ್ಲಿ ಸಣ್ಣ ಪಾತದಲ್ಲಿ ಅಭಿನಯಿಸಿದರು.
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಲ್ ನಿರ್ದೇಶನದ ನಾಗರಹಾವು ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇಮೇಜ್ ಸೃಷ್ಟಿ ಮಾಡಿದ ವಿಷ್ಟುದಾದ, ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಭಾರತ ದೇಶದಲ್ಲಿ ಒಬ್ಬ ಉತ್ತಮ ನಟನಾಗುವ ಮೂಲಕ ಹಲವಾರು ಪ್ರಶಸ್ತಿ ಗಳು ತಮ್ಮ ಮುಡಿಗೇರಿಸಿಕೊಂಡರು ಎಂದು ಸ್ಮರಿಸಿದರು
45 ವರ್ಷ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಒಬ್ಬ ಶ್ರೇಷ್ಠ ನಟನಿಗೆ ಕೇಂದ್ರ ಸರ್ಕಾರ ದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ನೀಡದೇ ಇರುವುದು ನಮ್ಮೆಲ್ಲರ ದೌರ್ಭಾಗ್ಯ.
ಮಹಾನ್ ನಟ ವಿಷ್ಣುವರ್ಧನ್ ಅವರಿಗೆ ಈಗಲಾದರೂ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಕಸಭಾ ಕಾಂಗ್ರೆಸ್ ಅದ್ಯಕ್ಷ ಆಪ್ಪಿ ವೆಂಕಟೇಶ್ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು,ಕಲಾವಿದರಾದ ಹೆಚ್ ಪ್ರಕಾಶ್ ರಾವ್,ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ್, ಎ ವಿ ಚಂದ್ರಶೇಖರ್, ಹೃದಯವಂತ ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಲಕ್ಷ್ಮಣ್, ಚೇತನ್, ವಿನೋದ್, ಗೋವಿಂದ್, ಮಂಜುನಾಥ್ ಮತ್ತು ಪದಾಧಿಕಾರಿಗಳು ಭಾಗವಹಿಸಿದರು.
ಕಾರ್ಯಕ್ರಮದ ನಂತರ ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..