ದೊಡ್ಡಬಳ್ಳಾಪುರ: ದೇಶದ ಛಾಯಾಗ್ರಹಣ ಕ್ಷೇತ್ರದಲ್ಲಿ ಉತ್ಕೃಷ್ಟವಾದ ಛಾಯಾಪದವಿಯಾದ FIAP (ಫಡರೇಷನ್ ಆಫ್ ಇಂಟರ್ ನ್ಯಾಷನಲ್ ಆರ್ಟ್ ಫೋಟೋಗ್ರಫಿ)ಗೆ ನಗರದ ಅಕ್ಷತಾ ಸ್ಟುಡಿಯೋ ಬಿ.ಎನ್.ಉಮಾಶಂಕರ್ ಅವರು ಆಯ್ಕೆಯಾಗಿದ್ದಾರೆ.
ಆ ಮೂಲಕ ಈ ಪದವಿ ಪಡೆದ ದೊಡ್ಡಬಳ್ಳಾಪುರದ ಮೊದಲ ಛಾಯಾಗ್ರಾಹಕರೆಂಬ ಕೀರ್ತಿ ಉಮಾಶಂಕರ್ ಅವರದ್ದಾಗಿದೆ.
ಈ ಪದವಿಗೆ ಸುಮಾರು 150 ಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ, ರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರಬೇಕು, ಜೊತೆಯಲ್ಲಿ 200 ಕ್ಕೂ ಹೆಚ್ಚಿನ ಛಾಯಾಚಿತ್ರಗಳು ಸ್ಪರ್ಧೆಗಳಲ್ಲಿ ನೋಡಲು ಅನುಮೋದನೆಗೊಂಡಿರಬೇಕಿದೆ. ಅಲ್ಲದೆ ವಯಕ್ತಿಕ ಛಾಯಾಗ್ರಹಣ ಸಾಧನೆಯನ್ನು ಪರಿಗಣಿಸಿ ನೀಡುವ ಪ್ರಶಸ್ತಿ ಇದಾಗಿದೆ.
ಈ FIAP ಪದವಿಯನ್ನು ದೇಶದ ಛಾಯಾಗ್ರಹಣ ಕ್ಷೇತ್ರದ ಅತ್ಯನ್ನತ ಸಂಸ್ಥೆಯಾದ ಫಡರೇಷನ್ ಆಫ್ ಇಂಟರ್ ನ್ಯಾಷನಲ್ ಆರ್ಟ್ ಫೋಟೋಗ್ರಫಿ ಸಂಸ್ಥೆ ನೀಡುತ್ತದೆ.
ಬಿ.ಎನ್.ಉಮಾಶಂಕರ್ ರವರು ಛಾಯಾಗ್ರಹಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಛಾಯಾಗ್ರಹಣದ ಅತ್ಯುನ್ನತ FIAP ಪದವಿ ಲಭಿಸಿದೆ.
ಈ ಪದವಿಯು ಛಾಯಾಗ್ರಹಣ ಕ್ಷೇತ್ರದಲ್ಲಿಯೇ ಅತ್ಯುತ್ತಮವಾದ ಪ್ರಶಸ್ತಿಯಾಗಿದ್ದು ನಮ್ಮ ರಾಜ್ಯದಲ್ಲಿ ಇಂತಹ ಪದವಿ ಸ್ವೀಕರಿಸಿದ ಸಾಧಕರಲ್ಲಿ ಕೆಲವೇ ವ್ಯಕ್ತಿಗಳು ಮಾತ್ರವೇ ಇದ್ದು, ಅವರ ಸಾಲಿಗೆ ಉಮಾಶಂಕರ್ ಸೇರ್ಪಡೆಯಾಗಿದ್ದಾರೆ.
ಪದವಿಗೆ ಪಾತ್ರರಾಗಿರುವ ಉಮಾಶಂಕರ್ ಅವರಿಗೆ ರಾಜ್ಯ ಹಾಗೂ ತಾಲೂಕು ಪೋಟೋ ಮತ್ತು ವಿಡಿಯೋ ಛಾಯಾಗ್ರಾಹಕ ಸಂಘಧ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..