ಶ್ರೀಹರಿಕೋಟ: ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03ಯನ್ನು ಗುರುವಾರ ನಸುಕಿನ ಜಾವ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.
2 ಸಾವಿರದ 268 ಕೆಜಿ ತೂಕದ ಜಿಎಸ್ ಎಲ್ ವಿ-ಎಫ್ 10 ಸಂಕೇತನಾಮ ಇಒಎಸ್ -3, ಜಿಯೋ-ಉಪಗ್ರಹಗಳ ಹೊಸ ಸರಣಿಯ ಭಾಗವಾಗಿದೆ, ಇದು ನಾಗರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇಸ್ರೋದ ಜಿಎಸ್‌ಎಲ್‌ವಿ-ಎಫ್ 10 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಿದೆ. ಭಾರತ ನಿರ್ಮಿತ ಪ್ರಮುಖ ಉಪಗ್ರಹದ ಈ ವರ್ಷದ ಮೊದಲ ಉಡಾವಣೆ ಇದಾಗಿದೆ.
ನಿಗದಿಯಂತೆ ಜಿಎಸ್‌ಎಲ್‌ವಿ-ಎಫ್ 10 ಉಡಾವಣೆ ಇಂದು 0543 ಗಂಟೆ ಐಎಸ್‌ಟಿಯಲ್ಲಿ ನಡೆಯಿತು. ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ. ಆದಾಗ್ಯೂ, ಕ್ರಯೋಜೆನಿಕ್ ಮೇಲಿನ ಹಂತದ ದಹನವು ತಾಂತ್ರಿಕ ಅಡಚಣೆಯಿಂದಾಗಿ ಉದ್ದೇಶಿತ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಇಸ್ರೊ ಹೇಳಿದೆ.
ಉಪಯೋಗ: ಭೂ ಪರಿವೀಕ್ಷಣಾ ಉಪಗ್ರಹ ನೈಜ ಕಾಲದ ಚಿತ್ರಗಳನ್ನು ದೇಶಕ್ಕೆ ಪೂರೈಸಲಿದೆ. ನೈಸರ್ಗಿಕ ವಿಪತ್ತುಗಳ ತ್ವರಿತ ಮೇಲ್ವಿಚಾರಣೆಗೂ ಶಕ್ತವಾಗಿದೆ.
ಜಿಯೋ ಸ್ಟೇಷನರಿ ಕಕ್ಷೆಯಲ್ಲಿ ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವನ್ನು ಇಡುವುದರಿಂದ ಪ್ರಮುಖ ಅನುಕೂಲಗಳಿವೆ ಎಂದು ತಜ್ಞರು ಹೇಳಿದ್ದಾರೆ. ಇದು ಭಾರತಕ್ಕೆ ಒಂದು ಅರ್ಥದಲ್ಲಿ ಗೇಮ್ ಚೆಂಜರ್ ಆಗಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ರಾಷ್ಟ್ರೀಯ ವಾಹಿನಿಗಳ ವರದಿಮಾಡಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..