ಬೆಂ.ಗ್ರಾ.ಜಿಲ್ಲೆ: ಆಧಾರ ಯೋಜನೆಯಡಿ ಸಾಲ ಮತ್ತು ಪ್ರೋತ್ಸಾಹಧನಕ್ಕಾಗಿ ವಿಕಲಚೇನರಿಂದ ಅರ್ಜಿ ಆಹ್ವಾನ

ಬೆಂ.ಗ್ರಾ.ಜಿಲ್ಲೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2021-2022ನೇ ಸಾಲಿನ “ಆಧಾರ” ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಇದಕ್ಕಾಗಿ ರೂ.1,00,000-00 ಸಾಲ ಸೌಲಭ್ಯ ಹಾಗೂ ಇದರಲ್ಲಿ 50% ಸಬ್ಸಿಡಿ ನೀಡಲಾಗುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ವಿಕಲಚೇತನರು ನಿಗದಿತ ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ ತಮ್ಮ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ., ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ. ಹಾಗೂ ಜಿಲ್ಲಾ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಸಲ್ಲಿಸಬಹುದಾಗಿದೆ. 

ಫಲಾನುಭವಿಗೆ ಶೇಕಡ 40 ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಇರತಕ್ಕದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಫಲಾನುಭವಿಗಳ ಆದಾಯ ವರ್ಷಕ್ಕೆ ರೂ.11,500-00ಗಳಿಗಿಂತ ಕಡಿಮೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರೂ.24,000/-ಮೀರದಂತೆ ಇರತಕ್ಕದ್ದು. (ತಹಶೀಲ್ದಾರ್‌ರವರಿಂದ ಪಡೆದ 2020-21ನೇ ಸಾಲಿನ ಮೂಲ ಆದಾಯ ಪ್ರಮಾಣ ಪತ್ರ  ಲಗತ್ತಿಸಬೇಕು.)

ಫಲಾನುಭವಿಗಳು ಅಕ್ಷರಸ್ಥರಾಗಿರಬೇಕು.(ವ್ಯಾಸಂಗ ದೃಢೀಕರಣ ಪತ್ರ ಲಗತ್ತಿಸಬೇಕು.) ಫಲಾನುಭವಿಗೆ ಸಣ್ಣ ವ್ಯಾಪಾರ ಮಾಡುವ ನೈಪುಣ್ಯತೆ ಇರಬೇಕು. ಅಂಗವಿಕಲ ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿ 10 ವರ್ಷಗಳಿಂದ ವಾಸವಾಗಿರುವ ಬಗ್ಗೆ ತಹಶೀಲ್ದಾರ್ ರವರಿಂದ ಪಡೆದ ದೃಢೀಕರಣ ಅಥವಾ ಕರ್ನಾಟಕದಲ್ಲಿ 10 ವರ್ಷಗಳಿಂದ ವ್ಯಾಸಂಗ ಮಾಡಿದ ವಿದ್ಯಾಭ್ಯಾಸದ ದೃಢೀಕರಣ ಪತ್ರ ಒದಗಿಸಬೇಕು. ಫಲಾನುಭವಿಗಳು ಸರ್ಕಾರಕ್ಕೆ ಸುಸ್ತಿದಾರರಾಗಿರಬಾರದು. (ಬ್ಯಾಂಕ್‍ಗಳಿಂದ ಬೇಬಾಕಿ ಪ್ರಮಾಣ ಪತ್ರ ಲಗತ್ತಿಸಬೇಕು.) ಫಲಾನುಭವಿಗೆ ಕನಿಷ್ಠ 18 ರಿಂದ 55 ವರ್ಷದೊಳಗಿರಬೇಕು. ಫಲಾನುಭವಿಗಳು ನಿರುದ್ಯೋಗಿಯಾಗಿರಬೇಕು.

ಅಂಗವಿಕಲತೆ ಹೊಂದಿರುವ ಬಗ್ಗೆ ಸಂಬಂಧಪಟ್ಟ ವೈದ್ಯಕೀಯ ಪ್ರಾಧಿಕಾರದಿಂದ ಪಡೆದ ಅಂಗವಿಕಲರ ಗುರುತಿನ ಚೀಟಿ/ ಯು.ಡಿ.ಐ.ಡಿ. ಕಾರ್ಡ್ ಜೆರಾಕ್ಸ್ ಪ್ರತಿ. ಈ ಹಿಂದೆ ಆಧಾರ/ಎನ್.ಹೆಚ್.ಎಫ್.ಡಿ.ಸಿ./ ಹಿಂದುಳಿದ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಇತರೆ ಯಾವುದೇ ಸರ್ಕಾರ/ ಸಂಘ-ಸಂಸ್ಥೆಗಳಿಂದ ಸಾಲ ಸೌಲಭ್ಯ ಪಡೆದಿರಬಾರದು. ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಬ್ಯಾಂಕ್‍ನ ಉಳಿತಾಯ ಖಾತೆ ಸಂಖ್ಯೆ, ಐ.ಎಫ್.ಎಸ್.ಸಿ. ಕೋಡ್‍ ಇರುವ ಪಾಸ್ ಪುಸ್ತಕದ ನಕಲು ಪ್ರತಿ ಲಗತ್ತಿಸಬೇಕು. ಆಧಾರ್ ಕಾರ್ಡ್ ನಕಲು ಪ್ರತಿ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ವಿಕಲಚೇತನರು‌ ಈ‌ ಎಲ್ಲಾ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ./ ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ. ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 03, ನೆಲಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೂ.ಸಂ.: 080-29787442,

ವಿಕಲಚೇತನರ ಸಹಾಯವಾಣಿ ದೂ.ಸಂ.: 080-29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video ನೋಡಿ

Doddaballapura; ಕೃಷ್ಣ ಬೈರೇಗೌಡ ಆರ್ಭಟಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿ.. ಮಹಿಳಾ ಸಿಬ್ಬಂದಿ ಕಣ್ಣೀರು Video

ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಟ್ಟು ಕನಿಷ್ಠ ನನ್ನ ಮಾತಿಗೆ ಮರ್ಯಾದೆ ನೀಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ್ ವಿರುದ್ಧ ಹರಿಹಾಯ್ದರು. Doddaballapura

[ccc_my_favorite_select_button post_id="99562"]
Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ ಸ್ವಾಮಿ.. ಕಣ್ಣೀರು

Ayyappaswamy garland: ಸಿಲಿಂಡರ್ ಸ್ಪೋಟ ಪ್ರಕರಣ: ದುರ್ಘಟನೆಯಿಂದ ಬೇಸತ್ತು ಅಯ್ಯಪ್ಪ ಮಾಲೆ ತೆಗೆದ

ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ. Ayyappaswamy garland

[ccc_my_favorite_select_button post_id="99555"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

Suicide: ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ..!

ತಮ್ಮ ಸೆಕ್ಟರ್ 47ರಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರೊಂದಿಗೆ ವಾಸಿಸುತ್ತಿದ್ದ ಸ್ನೇಹಿತರೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Suicide

[ccc_my_favorite_select_button post_id="99567"]
Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

Accident| Doddaballapura: ಕಾರು ಡಿಕ್ಕಿ.. ದೇವರ ಪೂಜೆಗೆ ಹೂ ಬಿಡಿಸುತ್ತಿದ್ದ ಮಹಿಳೆ ದುರ್ಮರಣ

ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ Accident

[ccc_my_favorite_select_button post_id="99558"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!