ನವದೆಹಲಿ: 79 ನೇ ಆವೃತ್ತಿಯ ಮನ್ಕಿ ಬಾತ್ನಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಈ ವೇಳೆ ಒಲಿಂಪಿಕ್ಸ್ನಲ್ಲಿ ಭಾರತದ ಜಯ ಸ್ಮರಿಸಿದ ಪ್ರಧಾನಿ ಅವರು. ಭಾರತದ ಒಲಿಂಪಿಕ್ಸ್ ತಂಡವನ್ನು ಎಲ್ಲರೂ ಬೆಂಬಲಿಸಿರಿ.. ನಿಮ್ಮ ತಂಡದ ಜತೆಗೆ ಭಾರತದ ವಿಜಯ ಹಂಚಿಕೊಳ್ಳಿ.. ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಬೆಂಬಲಿಸಿರಿ ಎಂದರು.
ಸೋಮವಾರ ಕಾರ್ಗಿಲ್ ವಿಜಯೋತ್ಸವ ದಿನ ಇರುವ ಹಿನ್ನೆಲೆ ಮಾತನಾಡಿದ ಮೋದಿ, ಕಾರ್ಗಿಲ್ ಯುದ್ಧವು ಶೌರ್ಯ, ಶಿಸ್ತಿನ ಸಂಕೇತ ಅದು ಇಡೀ ಜಗತ್ತಿಗೆ ಸಾಕ್ಷಿಯಾಗಿದೆ. ಧೈರ್ಯಶಾಲಿಗಳನ್ನ ನಾವೆಲ್ಲರೂ ಸ್ಮರಿಸೋಣ ಎಂದರು.
ದೇಶದಲ್ಲಿ ಕರೊನಾ ವೈರಸ್ ಇನ್ನೂ ಹೋಗಿಲ್ಲ. ಹಬ್ಬ, ಮದುವೆ, ಇತರೆ ಕಾರ್ಯಕ್ರಮಗಳಲ್ಲಿ ಎಚ್ಚರ ವಹಿಸಿ. ಕರೊನಾ ಮಾರ್ಗಸೂಚಿಗಳನ್ನು ಮರೆಯದಿರಿ. ಕರೊನಾ ನಿಯಮವನ್ನ ಎಲ್ಲರೂ ತಪ್ಪದೇ ಪಾಲಿಸಿ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..