ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ (98ವರ್ಷ) ಇಂದು ಮುಂಬೈ ನಲ್ಲಿ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಆರೋಗ್ಯ ಕಳೆದ 5 ದಿನಗಳಿಂದ ಬಿಗುಡಾಯಿಸಿತ್ತು. ಜೂನ್ 30ರಂದು ಮುಂಬೈ ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ದಿಲೀಪ್ ಕುಮಾರ್ ಅವರ ನಟನೆಯ ಹಲವು ಚಿತ್ರಗಳು ದಾಖಲೆಯನ್ನು ಬರೆದಿದ್ದವು. ನಾಯಾ ದೌರ್, ಮುಗಲ್-ಇ -ಅಜಂ. ದೇವ್ ದಾಸ್, ರಾಮ್ ಔರ್ ಶ್ಯಾಮ್, ಅಂದಾಜ್, ಮಧುಮತಿ , ಗಂಗಾ ಜಮುನಾ ಮುಂತಾದವು. 80ರ ದಶಕದಲ್ಲಿ ರೊಮ್ಯಾಂಟಿಕ್ -ಟ್ರ್ಯಾಜಿಕ್ ಪಾತ್ರಗಳ ಮೂಲಕವೇ ಜನಪ್ರಿಯರಾಗಿದ್ದರು. ಕ್ರಾಂತಿ, ಶಕ್ತಿ, ಕರ್ಮ, ಸೌಧಾಗರ್, ಮುಂತಾದವು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದವು. 1998 ರಲ್ಲಿ ಬಂದ ‘ಕಿಲಾ’ ಅವರ ಕೊನೆಯ ಚಿತ್ರವಾಗಿತ್ತು.
ಕಳೆದ 5 ವರ್ಷದಿಂದಲೂ ದಿಲೀಪ್ ಕುಮಾರ್ ಅನಾರೋಗ್ಯದಿಂದ ಆಗಿಂದ್ದಾಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ತಮ್ಮ 94 ನೇ ಜನ್ಮದಿನವನ್ನೂ ಆಸ್ಪತ್ರೆಯಲ್ಲೇ ಆಚರಿಸಿಕೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..