ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಅನ್ ಲಾಕ್ 2.O ಅಡಿಯಲ್ಲಿ ಸೋಮವಾರದಿಂದ ರಾಜ್ಯ ಸಾರಿಗೆ ಬಸ್‌ಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ.
ಅದರಂತೆ, 50 ಪರ್ಸೆಂಟ್ ಭರ್ತಿ ಆಧಾರದಲ್ಲಿ ಬಸ್‌ಗಳ ಓಡಾಟ ಶುರುವಾಗಲಿದ್ದು, ಚಾಲಕ, ನಿರ್ವಹಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೂನ್ 21ರ ನಂತರವೂ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಮುಂದುವರೆಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಜೂನ್.21ರಿಂದ ಅನ್’ಲಾಕ್ 2.0 ಆರಂಭವಾಗಲಿದ್ದು, ಈ ಹಂತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶೇ.50ರಷ್ಟು ಪ್ರಯಾಣಿಕರೊಂದಿಗೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಬಸ್ ಗಳನ್ನು ರಸ್ತೆಗಿಳಿಸಲು ಕೆಎಸ್ ಆರ್ಟಿಸಿ ಡಿಪೋದಲ್ಲಿ ಸಿದ್ದತೆ ಆರಂಭಿಸಲಾಗಿದೆ. ಬಸ್ ಗಳಿಗೆ, ನಗರದ ಸಾರಿಗೆ ಬಸ್ ನಿಲ್ದಾಣಕ್ಕೆ ಸ್ಯಾನಿಟೈಸರ್ ಮಾಡಿಸಲಾಗುತ್ತಿದೆ.
ಈ ಕುರಿತು ಡಿಪೋ ವ್ಯವಸ್ಥಾಪಕ ಆನಂದ್ ಹರಿತಲೇಖನಿಗೆ ಮಾಹಿತಿ ನೀಡಿದ್ದು, ಸಾರಿಗೆ ಇಲಾಖೆಯ ಸೂಚನೆ ಅನ್ವಯ ಸೋಮವಾರದಿಂದ ಸಾರಿಗೆ ಬಸ್ ಗಳನ್ನು ರಸ್ತೆಗೆ ಇಳಿಸುತ್ತಿದ್ದೇವೆ. ಪ್ರಯಾಣಿಕರ ಅಗತ್ಯತೆಯ ಪರಿಗಣಿಸಿ ದೂರ ದೂರಿನ ಪ್ರಯಾಣಕ್ಕೆ ಬಸ್ ಗಳನ್ನು ಕಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..