ತಾಳ್ಮೆ ಪರೀಕ್ಷೆಗೂ ಗೊರವನಹಳ್ಳಿ ರಸ್ತೆಗೆ ಬರಬೇಡಿ / ಜನ ಹಿತ ಮರೆತವರ ಮುಂದೆ ಎಷ್ಟೆಂದು ಕಿಂದರಿ ಬಾರಿಸೋದು..?

ದೊಡ್ಡಬಳ್ಳಾಪುರ: ರಾಜ್ಯದಲ್ಲಿನ ಪ್ರವಾಸಿ ಕ್ಷೇತ್ರಗಳ ಅಭಿವೃದ್ದಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಸರಕಾರಗಳು ಕೊಟ್ಯಾಂತರ ರೂ ಅನುದಾನವನ್ನು ನೀಡಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತವೆ.ಆದರೆ  ದೊಡ್ಡಬಳ್ಳಾಪುರದಿಂದ ಹೊಸಹಳ್ಳಿ ಮೂಲಕ ಸಾಗುವ ಗೋರವನಹಳ್ಳಿ ಮುಖ್ಯರಸ್ತೆ. ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳಕಡೆಗಣನೆ ಇಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ನಂದಿ ಬೆಟ್ಟ,ಎಸ್.ಎಸ್.ಘಾಟಿ, ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರವಾಸಿಗರನ್ನು ಸೆಳೆಯಲು ವಿಫಲವಾಗುತ್ತಿರುವ ಜೊತೆಗೆ ಈ ವ್ಯಾಪ್ತಿಯ ಗ್ರಾಮಗಳಿಗೆ ತೆರಳುವುದು ಸುಮಾರು ವರ್ಷಗಳಿಂದ ನರಕ ದರ್ಶನವಾಗುತ್ತಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಮಾರ್ಗವಾಗಿ ಗೊರವನಹಳ್ಳಿ ತೆರಳುವ 14.5ಕಿಮಿ ರಸ್ತೆ ಹದಗೆಟ್ಟು ಸುಮಾರು 30ಕ್ಕು ಹೆಚ್ಚು ವರ್ಷಗಳಾಗಿವೆ.

ದೊಡ್ಡಬಳ್ಳಾಪುರದ ಸನಿಹದಲ್ಲಿರುವ ಶ್ರೀ ಘಾಟಿಸುಭ್ರಮಣ್ಯ ದೇವಾಲಯ, ನಂದಿಬೆಟ್ಟದ ಭೇಟಿಗೆ ಬರುವ ಪ್ರವಾಸಿಗರಿಗೆ ಪಕ್ಕದ ತಾಲೂಕಿನ ಕೊರಟಗೆರೆಗೆ ಸೇರಿರುವ ಶ್ರೀ ಕ್ಷೇತ್ರವಾದ ಗೋರವನಹಳ್ಳಿ ತೆರಳಲು ಅತಿ ಸನಿಹದ ರಸ್ತೆಯಾದ ಕಾರಣ ಹಲವಾರು ವರುಷಗಳ ಕಾಲ ಪ್ರವಾಸಿಗರು ರಸ್ತೆಯನ್ನು ಬಳಸುತಿದ್ದರು ಅಲ್ಲದೆ ಬೆಂಗಳೂರಿನಿಂದ ಗೊರವನಹಳ್ಳಿಗೆ ಈ ಮಾರ್ಗ ಅತಿ ಕಡಿಮೆ ಅಂತರವಾದ ಕಾರಣ ಪ್ರತಿ ಶುಕ್ರವಾರ,ಮಂಗಳವಾರ ಹಾಗೂ ಭಾನುವಾರಗಳಂದು ವಾಹನಗಳ ಸಂಚಾರ ಹೆಚ್ಚಾಗಿ ಈ ರಸ್ತೆಯ ವ್ಯಾಪ್ತಿಯ ಗ್ರಾಮಗಳಿಗೆ ಆರ್ಥಿಕವಾಗಿ ಅನುಕೂಲಕರವಾಗಿತ್ತು.ಆದರೆ,ಈ ರಸ್ತೆಯ ನಿರ್ವಹಣೆ ಕೊರತೆಯಿಂದ ಹಳ್ಳಕೊಳ್ಳಗಳಂತಹ ಗುಂಡಿಗಳಿಗೆ ಹೆದರುವ ಪ್ರವಾಸಿಗರು ದೊಡ್ಡಬಳ್ಳಾಪುರದಿಂದ ದಾಬಸ್‌ಪೇಟೆ ಮೂಲಕ ಸುತ್ತಿ ಬಳಸಿ ಗೋರವನಹಳ್ಳಿ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.

ಹೊಸಹಳ್ಳಿ ಗ್ರಾಮದ ನಂತರ ಪ್ರಾರಂಭವಾಗುವ ಗುಂಡಿ ಬಿದ್ದಿರುವ ರಸ್ತೆಯು ಕೊರಟಗೆರೆ ಗಡಿಯವರೆವಿಗೂ ಸುಮಾರು 14.5ಕಿಮಿ ದೂರದವರೆಗೆ ಸಂಚರಿಸಲು ಅಸಾಧ್ಯವಾದ ರಸ್ತೆಯದಾಗಿದೆ.ಈ ವ್ಯಾಪ್ತಿಯಲ್ಲಿನ ಜಕ್ಕೇನಹಳ್ಳಿ,ಕಲ್ಲುಕುಂಟೆ,ಕಾಮೇನಹಳ್ಳಿ,ಪಚ್ಚಾರಲಹಳ್ಳಿ, ಲಿಂಗವೀರನಹಳ್ಳಿ, ಮರಿಮಾಕನಹಳ್ಳಿ,ದೊಡ್ಡನರಸಯ್ಯನಪಾಳ್ಯ,ಗುಟ್ಟಹಳ್ಳಿ,ಚಿಕ್ಕನರಸಯ್ಯನಪಾಳ್ಯ,ವೀರದಿಪ್ಪಯ್ಯನಪಾಳ್ಯ, ಕಿಲ್ಲಾರಲಹಳ್ಳಿ, ದಡಿಗಟ್ಟಮಡಗು,ಗೌಡನಕುಂಟೆ,ತಾಂಡ ಗ್ರಾಮಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕು ಹೆಚ್ಚು ಗ್ರಾಮಗಳಿಗೆ ಈ ರಸ್ತೆಯ ಮುಖ್ಯರಸ್ತೆಯಾಗಿರುವ ಕಾರಣ ಸುಮಾರು ನಾಲ್ಕು ಸಾವಿರಕ್ಕು ಹೆಚ್ಚು ಜನಸಂಖ್ಯೆ ಈ ರಸ್ತೆಯ ಅವ್ಯವಸ್ಥೆಯಿಂದ ಪರಿತಪ್ಪಿಸುತಿರುವುದು ಯಾವೊಬ್ಬ ಜನಪ್ರತಿನಿದಿಯ ಗಮನಕ್ಕೆ ಬಾರದಿರುವುದು ವಿಪರ್ಯಾಸ.

ನಿರ್ವಹಣೆ ಕೊರತೆಯಿಂದ ರಸ್ತೆ ಹಾಳು

2006ರಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಡಾಂಬರೀಕರಣವಾದ ನಂತರ ಸೂಕ್ತವಾದ ನಿರ್ವಹಣೆ ಮಾಡುವಲ್ಲಿ ಬೇಜವಬ್ದಾರಿ ತೋರಿದ ಅಧಿಕಾರಿಗಳು ದೊಡ್ಡಬಳ್ಳಾಪುರ ರಸ್ತೆಗಳ ಮುಖಪುಟದಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಮರೆತಿರುವಂತೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ಹಾಳುಬಿದ್ದಿದೆ.

ರಸ್ತೆಯಲ್ಲಿರುವ ಮೋರಿಗಳು ಕುಸಿದು ವರ್ಷಗಳೇ ಕಳೆದಿದ್ದು ದಿನ ನಿತ್ಯ ಒಂದಲ್ಲಾ ಒಂದು ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕರ ಪ್ರಾಣಹರಣಕ್ಕೆ ಕಾರಣವಾಗುತ್ತಿದೆ ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳಿಗೆ ಜಿಪಂ ಅನುಧಾನ ಈ ರಸ್ತೆಗೆ ಸಾಕಾಗುತ್ತಿಲ್ಲ ಎಂದು ನುಣಿಚಿಕೊಳ್ಳುತ್ತಾರೆಯೇ ಹೊರತು ಕಾಳಜಿವಹಿಸಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಉತ್ತಮ ರಸ್ತೆ ಕಾಮಗಾರಿ ನಡೆಸಬೇಕೆಂಬ ಕನಿಷ್ಟ ಪ್ರಜ್ಞೆಯು ಇಲ್ಲವಾಗಿದೆ.

ಇದೇ ಪಾಳು ಬಿದ್ದ ರಸ್ತೆಯಲ್ಲಿ ಸಾಗುವ ಘಟಾನುಘಟಿ ಜನ ಪ್ರತಿನಿಧಿಗಳು..!

ಇನ್ನು ಈ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೇ ಅಧಿಕಾರವಿಲ್ಲದ ಸಾಮಾನ್ಯ ಜನ ಪ್ರತಿನಿಧಿಗಳು ಇದ್ದಾರೆನ್ನುವಂತೆಯೂ ಇಲ್ಲ.ಜಿಲ್ಲಾಪಂಚಾಯಿತಿ ಅಧ್ಯಕ್ಷೆಯಿಂದ ಹಿಡಿದು ತಾಪಂ ಉಪಾಧ್ಯಕ್ಷೆ, ಎಪಿಎಂಸಿ ಅಧ್ಯಕ್ಷ, ಮೂರ್ ನಾಕು ಜನ ತಾಪಂ, ಮಾಜಿ ಅಧ್ಯಕ್ಷರು,ಪ್ರಭಾವಿ ವಿರೋಧ ಪಕ್ಷದ ನಾಯಕರುಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರಾದರೂ ಅವರುಗಳಿಗೆ ಈ ರಸ್ತೆಗೆ ಸೂಕ್ತ ಕಾಯಕಲ್ಪ ದೊರಕಿಸಬೇಕೆಂಬ ಕಾಳಜಿಯೇ ಇಲ್ಲವಾಗಿದೆ ಎಂಬುದು ಈ ವ್ಯಾಪ್ತಿಯ ಜನರ ಕೊರಗು.

ನೋಟು ರದ್ದತಿ ಅಡ್ಡಿಯಾಯ್ತೇ..ಕಾಮಗಾರಿಗೆ..!

ಕಳೆದ ಮೈತ್ರಿ ಸರ್ಕಾರದ ಸಮಯದಲ್ಲಿ ಈ ರಸ್ತೆ ಕಾಮಗಾರಿಗೆಂದು ಬಿಡುಗಡೆಯಾಗಿದ್ದ, ಸುಮಾರು ಎರಡು ಕೋಟಿಗೂ ಹೆಚ್ಚು ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂಬ ಆರೋಪ ಶಾಸಕರಾದಿಯಾಗಿ ಸ್ಥಳೀಯ ಜನ ಪ್ರತಿನಿಧಿಗಳದ್ದಾದರೆ.ಮತ್ತೆ ಸರ್ಕಾರ ತಡೆ ಹಿಡಿದರೆ ಜನಪರ ಹೊತ್ತಿರುವ ನಿಮಗೆ ಅನುದಾನವನ್ನು ಬಿಡುಗಡೆ ಮಾಡಿಸುವ ಜವಬ್ದಾರಿಯಿಲ್ಲವೆ ಎಂಬ ಪ್ರಶ್ನೆ ಸ್ಥಳೀಯರದ್ದು. 

ತೇಪೆ ಕಾರ್ಯಕ್ಕೆ ಲಕ್ಷಾಂತರ ಹಣ..?

ಚುನಾವಣೆ ಸಂದರ್ಭದಲ್ಲಿ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಈ ರಸ್ತೆಯ ಮೇಲೆ ಕೆಲವರಿಗೆ ಎಲ್ಲಿಲ್ಲದ ಪ್ರೀತಿ ಬಂದುಬಿಡುತ್ತದೆ.ಸುಮಾರು 14.5ಕಿಮಿ ರಸ್ತೆಗೆ ಶಾಶ್ವತ ಕಾಮಗಾರಿ ನಡೆಸದೆ ಜಿಪಂ,ತಾಪಂ ಅನುಧಾನದಲ್ಲಿ ಅದೇಷ್ಟು ಸಲ  ಗುಂಡಿಗಳಿಗೆ ಮಣ್ಣು ತುಂಬಿ ಲಕ್ಷಾಂತರ ಹಣ ವೆಚ್ಚಮಾಡಿದ್ದಾರೋ.ಇದರ ಗುತ್ತಿಗೆ ಪಡೆದ ಆ ಗುತ್ತಿಗೆದಾರರನ ಅದೃಷ್ಟ ಹೇಳತೀರದು.

ಇತ್ತೀಚೆಗೆ ಸ್ಥಳೀಯರ ಆಕ್ರೋಶ ಹೆಚ್ಚಾದ ಹಿನ್ನಲೆ ಕೆಲ ಅನುಧಾನದಲ್ಲಿ ದಡಿಗಟ್ಟಮಡಗು – ಗೌಡನಕುಂಟೆ ವರೆಗೆ ಡಾಂಬಾರ್ ಕಾಮಗಾರಿ ನಡೆಸಿದ್ದರೆ ಲಿಂಗಧೀರನಹಳ್ಳಿ – ಪಚ್ಚಾರನಹಳ್ಳಿಯವರೆಗೆ ಕೆಲವೇ ಕಿಲೋ ಮೀಟರ್ ರಸ್ತೆ ಕಾಮಗಾರಿ ನಡೆಸಿದ್ದು ಅದೂ ಸಹ ಕಳಪೆ ಕಾಮಗಾರಿಯಿಂದ ಹಾಳಾಗಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಒಟ್ಟಾರೆ ಜವಬ್ದಾರಿ ಮರೆತು ಮತ ಚಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಸ್ಥಳೀಯ ಜನತೆ ಬಹು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಲೇ ಬರುತ್ತಿರುವುದು ಸಾಕ್ಷಿಯಾಗಿದೆ.

ಕನಿಷ್ಠ ಸ್ಥಳೀಯ ಗ್ರಾಮಗಳಿಗಲ್ಲದೆ ನಂದಿ ಬೆಟ್ಟ,ಎಸ್.ಎಸ್.ಘಾಟಿ,ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕ ಕಲ್ಪಿಸುವ ಮೂಲಕ ಪ್ರವಾಸೋಧ್ಯಮಕ್ಕೂ ಒತ್ತು ಸಿಗುವುದು ಎಂದು….? ಎಷ್ಟು ಸರಿ  ಕಿಂದರಿ ಬಾರಿಸುತ್ತಲೇ ಇರುವುದು ತಿಳಿಯದಾಗಿದೆ.

ರಾಜಕೀಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ House construction

[ccc_my_favorite_select_button post_id="99191"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ ಎಂದು ಅಭಿಮಾನಿಗಳ ಆಕ್ರೋಶ| Darshan

ಮತ್ತೆ ದರ್ಶನ್ ಬೆನ್ನಿಗೆ ಬಿದ್ದ ಖಾಸಗಿ ಸುದ್ದಿ ವಾಹಿನಿಗಳು..!: ಸುಳ್ಳು ಸುದ್ದಿ ಮಾಡಬೇಡಿ

ಕೆಲ ಖಾಸಗಿ ಸುದ್ದಿವಾಹಿನಿಗಳ ಬಗ್ಗೆ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ Darshan

[ccc_my_favorite_select_button post_id="99206"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]