ದೊಡ್ಡಬಳ್ಳಾಪುರ: ಕರೊನಾ ಸೋಂಕು ತಡೆಗೆ ಕುರಿತಂತೆ ಬೆಂಗಳೂರಿನ ಚಿಕ್ಕಜಾಲದ ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೂರನೆ ವರ್ಷದ ವಿದ್ಯಾರ್ಥಿಗಳು ತಾಲೂಕಿನ ಚನ್ನವೀರನಹಳ್ಳಿಯಲ್ಲಿ ಶನಿವಾರ ಜನಜಾಗೃತಿ ಕಾರ್ಯಕ್ರಮ ಕೈಗೊಂಡರು.
ಕಾಲೇಜಿನ ಹತ್ತು ಮಂದಿ ವಿದ್ಯಾರ್ಥಿಗಳ ತಂಡ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕರೊನಾ ತಡೆಗೆ ಕೈಗೊಳ್ಳ ಬೇಕಾದ ಮುಂಜಾಗ್ರತೆಯನ್ನು ತಿಳಿಸಿಕೊಟ್ಟರು.
ಈ ವೇಳೆ ಗ್ರಾಮದ ಮುಖಂಡ ಸಿ.ಎಂ.ಗೋಪಾಲಕೃಷ್ಣ, ವಿದ್ಯಾರ್ಥಿಗಳಾದ ವರ್ಷಿತ ಬಿ,ಸ್ನೇಹಾ, ಭೂಮಿಕಾ, ಯಶಸ್ವಿನಿ, ರಘು ಚಂದನ್, ಪ್ರಜ್ವಾಲ್, ನಿತ್ಯಾನಂದ,ಚಂದ್ರಶೇಖರ್, ಸಂತೋಷ್ ಮತ್ತಿತರಿದ್ದರು.