ದೊಡ್ಡಬಳ್ಳಾಪುರ: ಅತ್ತ ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದ್ದರೆ,ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುತ್ತಾ ನಗರದ ಕೋಟೆರಸ್ತೆಯ ಮುತ್ಯಾಲಮ್ಮ ಕೂರಿಸುವ ಸ್ಥಳದಲ್ಲಿ ಶ್ರೀ ರಾಮಚಂದ್ರರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಲಾಯಿತು.
ಹಿರಿಯರಾದ ಬಿ ಟಿ ಸೂರ್ಯನಾರಾಯಣ್ ಪೂಜೆ ಸಲ್ಲಿಸಿದರು.
500 ವರ್ಷಗಳ ಪ್ರಯತ್ನ ಮತ್ತು ಹೋರಾಟದ ಫಲದಿಂದ ಇಂದು ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಿದ್ದಾರೆ.ಈ ಸಂದರ್ಭದಿಂದ ದೇವಾಲಯ ಕಾರ್ಯ ಪೂರ್ಣಗೊಳ್ಳುವ ವರೆಗೆ ಯಾವುದೇ ತೊಂದರೆ ಆಗದಿರಲೆಂದು ಪೂಜೆ ಸಲ್ಲಿಸಲಾಗುತ್ತಿದೆ ಎಂದು ಗಾಳಿಪಟ ಕಲಾಸಂಘದ ಪ್ರಕಾಶ್ ಹರಿತಲೇಖನಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ್, ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಮುನಿರಾಜು,ಶ್ರೀನಾಥ್,ಭಾಸ್ಕರ್ ಬಾಬು, ಮಹೇಶ್ ಇತರರು ಭಾಗವಹಿಸಿದ್ದರು.