ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಹಾಗೂ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು,ಮಂಗಳವಾರದ ಸಂಜೆಯ ವೇಳೆಗೆ ತಾಲೂಕಿನಲ್ಲಿ 36 ಮಂದಿಗೆ ಸೋಂಕು ದೃಢ ಪಟ್ಟು,26 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ,ಮಂಗಳವಾರದ ಸಂಜೆಯವರಗೆ ತಾಲ್ಲೂಕಿನ 26 ಮಂದಿ ಗಂಡು ಹಾಗೂ 10 ಮಂದಿ ಮಹಿಳೆಯರು ಸೇರಿ ಮೂವತ್ತಾರು ಜನರಿಗೆ ಕರೊನಾ ಸೋಂಕು ದೃಢ ಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ಮುತ್ತೂರು 2, ಗಾಣಿಗರಪೇಟೆ 1, ಹೊಸ ಪೊಲೀಸ್ ಕ್ವಾಟ್ರಸ್ 2, ಟ್ಯಾಂಕ್ ರಸ್ತೆ 1, ಪಾಲನಜೋಗಹಳ್ಳಿ 1, ಸುತ್ತಹಳ್ಳಿ 1, ಮಾಚಗೊಂಡನಹಳ್ಳಿ 1, ರೈಲ್ವೆ ಸ್ಟೇಷನ್ 5, ರಂಗಪ್ಪ ವೃತ್ತ 1, ರಘುನಾಥ ಪುರ 1,ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ 1, ರಾಜೀವ್ ಗಾಂಧಿ ಕಾಲೋನಿ 1, ದರ್ಗಾಪುರ 2, ಕಮಲೂರು 2, ಕನಸವಾಡಿ ಕಾಲೋನಿ 4, ಪೊಲೀಸ್ ಸ್ಟೇಷನ್ ಕ್ವಾಟ್ರಸ್ 1, ಸೋಮೇಶ್ವರ ಬಡಾವಣೆ 1, ಸ್ಕೌಟ್ ಕ್ಯಾಂಪ್ ರಸ್ತೆ 1, ಬಾಶೆಟ್ಟಿಹಳ್ಳಿಯ ಜನತಾ ಕಾಲೋನಿ 4, ಪಾಲ್ ಪಾಲ್ ದಿನ್ನೆ 1 ಹಾಗೂ ಚಿಕ್ಕಪೇಟೆಯ ಇಬ್ಬರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 557 ಕರೊನಾ ಪ್ರಕರಣಗಳಾಗಿದ್ದು,246 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 25 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 220 ಮಂದಿಯನ್ನು ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ /ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.