ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು ಆಂತರಿಕ ಭದ್ರತೆ ವಿಭಾಗದ ಎಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದರು.
ಡಿಜಿಪಿ ಪಿ.ಎಸ್.ಸಂಧು ಅವರಿಂದ ಅಧಿಕಾರ ಸ್ವೀಕರಿಸಿರುವ ಭಾಸ್ಕರ್ ರಾವ್ ಅವರು ಆಂಟಿಟೆರರ್,ಕರಾವಳಿ,ಆಂಟಿನಕ್ಸಲ್, ಕೈಗಾರಿಕಾ,ಅಣೆಕಟ್ಟುಗಳು,ವಿಮಾನ ನಿಲ್ದಾಣ ಮತ್ತು ಖಾಸಗಿ ಭದ್ರತೆಗಳಲ್ಲಿ ಕೆಲಸ ಮಾಡಲು ಸವಾಲುಗಳ ಪುಷ್ಪಗುಚ್ಚ ನನ್ನ ಎದುರಿದ್ದು. ಸಮನ್ವಯತೆ,ನಾಯಕತ್ವ,ಕಡಿದಾದ ಕಲಿಕೆ ಕಾರ್ಯಸೂಚಿಯಲ್ಲಿದೆ ಎಂದು ಟ್ವಿಟ್ ಮಾಡಿದ್ದಾರೆ.