ದೊಡ್ಡಬಳ್ಳಾಪುರ: ಮಂಗಳವಾರ ಸಂಜೆಯಷ್ಟೆ ತಾಲೂಕಿನಲ್ಲಿ 400ಗಡಿ ಮೀರಿ ಕರೊನಾ ಸೋಂಕಿತರ ಸಂಖ್ಯೆ ಬೆಳೆದಿದ್ದ ಬೆನ್ನಲ್ಲಿಯೇ.ಬುಧವಾರದ ಸಂಜೆಯ ಬುಲೆಟಿನ್ ವರದಿಯಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ದ್ವಿಶತಕದ ಗಡಿಗೆ ತಲುಪುತ್ತಿರುವ ಶುಭ ಸುದ್ದಿ ತಾಲುಕಿನ ಜನತೆಗೆ ಬಂದಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ ಅನ್ವಯ.ಬುಧವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 26 ಮಂದಿ ಗಂಡು ಹಾಗೂ 8 ಮಂದಿ ಮಹಿಳೆಯರು ಸೇರಿ ಮೂವತ್ನಾಲ್ಕು ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದರೆ,173 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ಬಾಶೆಟ್ಟಿಹಳ್ಳಿ 1, ಕೆಂಪೇಗೌಡ ನಗರ 2, ಮಲ್ಲೊಹಳ್ಳಿ 1, ರಾಜೀವ್ ಗಾಂಧಿ ಕಾಲೋನಿ 2, ತ್ಯಾಗರಾಜ ನಗರ 1, ಯಾಕಾರ್ಲಹಳ್ಳಿ(ಗುಂಡಮಗೆರೆ) 1, ಗುಂಡಮಗೆರೆ 1, ತೇರಿನಬೀದಿ 1, ರೋಜಿಪುರ 1, ಕಾಡತಿಪ್ಪೂರು 4, ಮುತ್ತೂರು 1, ಕರೇನಹಳ್ಳಿ 2, ಗುಡ್ಡಹಳ್ಳಿ 2, ದರ್ಗಾಪೇಟೆ 2, ಡಿಕ್ರಾಸ್ 1, ಜಿ.ಹೊಸಹಳ್ಳಿ 1, ಖಾಸಗಿ ಕಂಪನಿ 1, ಖಾಸ್ ಬಾಗ್ 1, ವಿದ್ಯಾನಗರ 1, ಹಾದ್ರಿಪುರ 1, ಚಿಕ್ಕಹೆಜ್ಜಾಜಿ 1, ದೊಡ್ಡಬಳ್ಳಾಪುರ ಪೊಲೀಸ್ ಕ್ವಾಟ್ರಸ್ಸಿನ ಇಬ್ಬರು, ಹಾಗೂ ಕೃಷ್ಣಗಿರಿಯ ಓರ್ವ ವ್ಯಕ್ತಿ ಮತ್ತು ವಿಶ್ವನಾಥಪುರ ಪೊಲೀಸ್ ಕ್ವಾಟ್ರಸ್ಸಿನ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ತಾಲೂಕಿನಲ್ಲಿ 443 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,173 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 27 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 228 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.