ದೊಡ್ಡಬಳ್ಳಾಪುರ: ತಾಲೂಕಿನ ಕರೊನಾ ಸೋಂಕಿತರ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು,ನಗರದ ಇಸ್ಲಾಂಪುರದ ಸುಮಾರು 55ವರ್ಷದ ಮಹಿಳೆಯೋರ್ವರು ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ.ಇಂದು ಇಬ್ಬರು ಪುರುಷರು ಹಾಗೂ ಮೂರು ಮಂದಿ ಮಹಿಳೆ ಸೇರಿ ಒಟ್ಟು ಐದು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ ತಪಸೀಹಳ್ಳಿಲ್ಲಿ 1, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ 2, ಗೋವಿಂದಪುರದ 1 ಹಾಗೂ ಯಲಹಂಹ ನ್ಯೂ ಟೌನಿನ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜುಲೈ 25 ಶನಿವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 279 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಹತ್ತು ಮಂದಿ ಮೃತ ಪಟ್ಟಿದ್ದರೆ,82 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 29 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 158 ಮಂದಿಯನ್ನು ದೇವನಹಳ್ಳಿ / ಹಜ್ ಭವನ / ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.