ದೊಡ್ಡಬಳ್ಳಾಪುರ: ಕರೊನಾ ಸೊಂಕಿತರ ಮಾಹಿತಿಯ ಗೊಂದಲ ನಿವಾರಿಸಲು,ತಾಲೂಕಿಗೆ ಸಂಬಂಧಿಸಿದ ಬುಲೆಟಿನ್ ನೀಡುವಂತೆ ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ಸೂಚನೆ ನೀಡಲಾಗುವುದೆಂದು ಶಾಸಕ ಟಿ.ವೆಂಕಟರಮಣಯ್ಯ ಹರಿತಲೇಖನಿಗೆ ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ಕರೊನಾ ಸೋಂಕಿನ ಬುಲೆಟಿನ್ ವರದಿಯ ಕುರಿತು ತಾಲೂಕಿನ ಜನತೆಯಲ್ಲಿ,ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ.
ಹರಿತಲೇಖನಿ ಕಲೆಹಾಕಿದ ಮಾಹಿತಿಯಂತೆ.ತಾಲೂಕು ಆಡಳಿತ,ತಾಲೂಕು ಆರೋಗ್ಯ ಇಲಾಖೆಯ ವರದಿಗೂ.ಜಿಲ್ಲಾ ಮತ್ತು ರಾಜ್ಯದ ಬುಲೆಟಿನ್ಗೂ ಸಾಮ್ಯತೆ ಇಲ್ಲದೆ ಜನತೆಯಲ್ಲಿ ಕರೊನಾ ಸೋಂಕಿನ ಸ್ಥಿತಿಗತಿ ಕುರಿತು ಗೊಂದಲಕ್ಕೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸಂಬಂಧಿಸಿದ ಕರೊನಾ ಸೋಂಕಿತರ ವರದಿಗಳನ್ನು.ತಾಲೂಕು ಮಟ್ಟದಲ್ಲಿಯೇ ಪ್ರತ್ಯೇಕ ಬುಲೆಟಿನ್ ನೀಡಿ ಗೊಂದಲ ನಿವಾರಿಸುವಂತೆ ತಹಶಿಲ್ದಾರ್ ಅವರಿಗೆ ಸೂಚನೆ ನೀಡಲಾಗುವುದೆಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.
ಗೊಂದಲಕಾರಿ ವರದಿಗೆ ತಾಪಂ ಅಧ್ಯಕ್ಷ ಬೇಸರ
ಕರೊನಾ ಸೋಂಕಿತ ಪ್ರಕರಣಗಳು ತಾಲೂಕಿನಲ್ಲಿ ಹಚ್ಚುತ್ತಿದ್ದರು ವರದಿಯಲ್ಲಿ ಉಲ್ಲೇಖವಾಗದಿರುವುದು ಆತಂಕವನ್ನು ಹೆಚ್ಚಿಸಿದೆ ಎಂದು ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು ತಾಲೂಕಿನಿಂದ ವರದಿ ಸಲ್ಲಿಕೆಯಾದರು ಬುಲೆಟಿನ್ ಅಲ್ಲಿ ನಮೂದಾಗುತ್ತಿಲ್ಲ.ದೊಡ್ಡಹೆಜ್ಜಾಜಿಯಲ್ಲಿ ಸೋಂಕು ದೃಢ ಪಟ್ಟು ಸೀಲ್ ಡೌನ್ ಮಾಡಲಾಗಿದೆ.ಆದರೆ, ವರದಿಯಲ್ಲಿ ಪ್ರಸ್ತಾಪವಾಗುತ್ತಿಲ್ಲ.ಈ ಕಾರಣ ತಾಲೂಕಿಗೆ ಸಂಬಂಧಿಸಿದ ಪ್ರತ್ಯೇಕ ಕರೊನಾ ಬುಲೆಟಿನ್ ನೀಡುವ ಅಗತ್ಯವಿದ್ದು.ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.