ನವದೆಹಲಿ: ಭಾರತಕ್ಕೆ ಶಾಂತಿ ಬೇಕು, ನಮ್ಮ ತಾಳ್ಮೆಯನ್ನು ಕೆಣಕಬೇಡಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ.ಯಾರಿಗೂ ಯಾವ ಸಂದೇಹ, ಅನುಮಾನ ಬೇಡ, ಚೀನಾಕ್ಕೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಬುಧವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಯ ಸಭೆಯ ಆರಂಭದಲ್ಲಿ ಚೀನಾ ಸಂಘರ್ಷದ ಕುರಿತು ಮಾತನಾಡಿದರು. ದೇಶವನ್ನು ರಕ್ಷಿಸಿಕೊಳ್ಳಲು ನಮ್ಮನ್ನು ಯಾರು ತಡೆಯುವರು ಇಲ್ಲ ಭಾರತ ಶಾಂತಿಯನ್ನು ಬಯಸುತ್ತೆ. ಆದ್ರೆ ನಮ್ಮನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮ ಹುತಾತ್ಮ ಯೋಧರು ಕೊನೆಯವರೆಗೂ ಹೋರಾಡಿದ್ದಾರೆ. ಭಾರತಕ್ಕೆ ಶಾಂತಿ ಬೇಕು, ನಮ್ಮ ತಾಳ್ಮೆಯನ್ನು ಕೆಣಕಬೇಡಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ. ಯಾರಿಗೂ ಯಾವ ಸಂದೇಹ, ಅನುಮಾನ ಬೇಡ, ಚೀನಾಕ್ಕೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದರು.