ಲಡಾಕ್ : ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಯೋಧರು ಹುತಾತ್ಮರಾಗಲು ಕಾರಣವೇನು ಏಂಬ ಮಾಹಿತಿ ಹರಿತಲೇಖನಿಗೆ ಲಭ್ಯವಾಗಿದೆ.
ಭಾರತ ಹಾಗೂ ಚೀನಾ ನಡುವೆ ಲಡಾಖ್ ಬಿಕ್ಕಟ್ಟು ಶಮನಗೊಳಿಸುವ ಹಾಗೂ ಸೇನೆ ಹಿಂಪಡೆಯುವ ಮಾತುಕತೆ ವೇಳೆ,ಯೋಧರ ನಡುವೆ ಮಾತಿನ ಚಕಮಕಿ ನಡೆದಿದ್ದು,ತಳ್ಳಾಟ ನೂಕಾಟ,ಕಲ್ಲು ತೂರಾಟ ಹಾಗೂ ಕಬ್ಬಿಣದ ರಾಡ್ಗಳಿಂದ ಒಡೆದಾಟ ನಡೆದಿದೆ ಎನ್ನಲಾಗಿದೆ.
ತಳ್ಳಾಟದಲ್ಲಿ ಭಾರತೀಯ ಕರ್ನಲ್ ಹಾಗೂ ಇಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದಿದ್ದು,ಚಳಿ ತೀವ್ರವಾಗಿದ್ದ ಕಾರಣ ಅವರನ್ನು ರಕ್ಷಿಸುವಷ್ಟರಲ್ಲಿ ದೇಹ ಮರಗಟ್ಟಿ ಹುತಾತ್ಮರಾದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಚೀನಾ ಪಾಳಯದಲ್ಲು ಸಾವು,ನೀವು ಉಂಟಾಗಿದ್ದು,ಐದು ಯೋಧರು ಸಾವನಪ್ಪಿ ಇನ್ನು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು.ಪ್ರಧಾನಿ ನರೇಂದ್ರ ಮೋದಿ ಗೃಹಸಚಿವರಿಂದ ಮಾಹಿತಿ ಪಡೆದಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
1975ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದಿದ್ದ ಭಾರತೀಯ ಸೈನಿಕರ ಹತ್ಯೆಯ ನಂತರ ಈ ಘಟನೆ ನಡೆದಿದೆ.
**********