ದೊಡ್ಡಬಳ್ಳಾಪುರ: ಕೊಳವೆ ಬಾವಿ ವಿಫಲವಾದ ಹಿನ್ನೆಲೆಯಲ್ಲಿ ಸಾಲಕ್ಕೆ ಹೆದರಿ ಆಚಾರಲಹಳ್ಳಿ ಗ್ರಾಮದ ರೈತ ಚಂದ್ರಶೇಖರ್(41) ತೋಟದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂದುವರೆ ಎಕರೆ ಸ್ವಂತ ಕೃಷಿ ಭೂಮಿ ಹಾಗೂ 3 ಎಕರೆ ಭೂಮಿ ಗುತ್ತಿಗೆ ಪಡೆದು ರೇಷ್ಮೆ ಹಾಗೂ ಹೂವು ಬೆಳೆ ಬೆಳೆಯುತ್ತಿದ್ದರು.
ಎರಡು ತಿಂಗಳಿಂದ ಈಚೆಗೆ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದು ಎಲ್ಲದರಲ್ಲೂ ನೀರು ಬತ್ತಿ ಹೋಗಿದ್ದವು. ಮೃತ ರೈತ ಚಂದ್ರಶೇಖರ್ ಕೊಳವೆ ಬಾವಿ ಕೊರೆಸಲು ಖಾಸಗಿಯಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮೃತರಿಗೆ ಪತ್ನಿ,ಇಬ್ಬರು ಪುತ್ರಿಯರು,ಒಬ್ಬ ಪುತ್ರ ಇದ್ದಾರೆ.
ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.