ದೊಡ್ಡಬಳ್ಳಾಪುರ : ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ತಿರುಪತಿಯ ಆಸ್ತಿ ಮಾರಾಟ ಮಾಡಲು ಮುಂದಾಗಿರುವುದಕ್ಕೆ ಹಿಂದು ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ತಮಿಳುನಾಡಿನ ವಿವಿಧ ಸ್ಥಳಗಳಲ್ಲಿರುವ ಮನೆ ಮತ್ತು ಕೃಷಿ ಭೂಮಿ ಸೇರಿದಂತೆ ಹಲವು ಸ್ಥಿರ ಆಸ್ತಿಗಳನ್ನು ಹರಾಜಿಗಿಡಲು ನಿರ್ಧರಿಸಿದೆ.ಇದರಿಂದಾಗಿ ಜಗನ್ ಮೋಹನ್ ರೆಡ್ಡಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು. ತಮ್ಮ ರಾಜ್ಯಗಳನ್ನು ಅಲ್ಪಸಂಖ್ಯಾತರ ರಾಜ್ಯಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಆರೋಪಿಸಿದ್ದಾರೆ.
ದೇವಸ್ಥಾನಗಳ ಆಸ್ತಿ ಮಾರಾಟದ ಜತೆಗೆ ರಾಜ್ಯದಲ್ಲಿ ಹಿಂದುತ್ವಕ್ಕೆ ಹಾನಿ ಉಂಟುಮಾಡುವುದು ಸರಕಾರದ ಉದ್ದೇಶವಾಗಿರುವಂತಿದೆ. ಸರಕಾರವು ಇಂತಹ ನಿರ್ಧಾರ ಕೈಗೊಳ್ಳುವ ಮೂಲಕ ಹಿಂದೂಗಳ ಭಾವನೆ ಜತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರಕಾರ ಈ ನಿರ್ಧಾರಕ್ಕೆ ತಡೆ ನೀಡಬೇಕು. ಇಲ್ಲದಿದ್ದರೆ ಹಿಂದೂಗಳ ಪ್ರತಿಭಟನೆ, ಆಕ್ರೋಶ, ಅಸಹನೆ ಎದುರಿಸಬೇಕಾಗುತ್ತದೆ,ಎನ್ನುವ ಸಂದೇಶಗಳು ಹರಿದಾಡುತ್ತಿವೆ.
” ಆದೇಶಕ್ಕೆ ತಡೆ “
ಆಸ್ತಿಗಳ ಹರಾಜಿಗೆ ಮುಂದಾಗಿದ್ದ ಟಿಟಿಡಿ ನಿರ್ಧಾರ ರಾಜಕೀಯ ಸ್ವರೂಪ ಪಡೆಯುತ್ತಿರುವುದು ಹಾಗೂ ಹಿಂದುಗಳ ಆಕ್ರೋಶಕ್ಕೆ ಒಳಗಾಗುತ್ತಿರುವುದರಿಂದ ಎಚ್ಚೆತ್ತ ಸರಕಾರ, ಈಗ ಆಸ್ತಿ ಹರಾಜಿಗೆ ತಡೆ ನೀಡಿದೆ.
ಹಿಂದೂ ವಿರೋಧಿ ರಾಜಕೀಯ ಶಕ್ತಿಗಳ ವಿರುದ್ದ ಹೋರಾಟ ಅಗತ್ಯ – ಮಧು ಬೇಗಲಿ
ಹಿಂದೂ ದೇಗುಲಗಳನ್ನು ಇಂತಹ ರಾಜಕಾರಣಿಗಳ ಕಪಿಮುಷ್ಠಿಯಿಂದ ನಾವು ರಕ್ಷಿಸಬೇಕಿದೆ.ಕೋಟ್ಯಾಂತರ ಹಿಂದೂ ಜನರ ಭಾವನೆಗಳಿಗೆ ಅಪಮಾನ ಎಸಗುತ್ತಿರುವ ಹಿಂದೂ ವಿರೋಧಿ ರಾಜಕೀಯ ಶಕ್ತಿಗಳ ವಿರುದ್ದ ಹೋರಾಟ ಅಗತ್ಯ ಎಂದು ಎಂದು ಭಜರಂಗದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ್ ಮಧು ಬೇಗಲಿ ತಿಳಿಸಿದ್ದಾರೆ.
ಹಿಂದು ವಿರೋಧಿ ನೀತಿ ಖಂಡನೀಯ – ದೊಡ್ಡತುಮಕೂರು ಆನಂದ್
ಹಿಂದು ಭಕ್ತಾಧಿಗಳ ಭಾವನೆಗಳಿಗೆ ನೋವುಂಟಾಗದಂತೆ ಮುನ್ನೆಚ್ಚರಿಕೆ ವಹಿಸದೆ, ಟಿಟಿಡಿ ಆಸ್ತಿಗಳು ಅಥವಾ ಬೇರೇ ಯಾವುದೇ ಆಸ್ತಿ ಪಾಸ್ತಿಗಳ ಮಾರಾಟ ಮಾಡಲು ಮುಂದಾಗಿದ್ದು ಹಿಂದು ವಿರೋಧಿ ನೀತಿಯಾಗಿದ್ದು,ವ್ಯವಸ್ಥಿತ ಶಡ್ಯಂತ್ರ ಎಂದು ಹಿಂದು ಜಾಗರಣ ವೇದಿಗೆ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
( ಸಾಂದರ್ಭಿಕ ಚಿತ್ರ ಬಳಸಲಾಗಿದೆ)