ದೊಡ್ಡಬಳ್ಳಾಪುರ : ತಾಲೂಕಿನ ಎರಡನೇ ಅವಧಿಗೆ ಶಾಸಕರಾಗಿ ಟಿ.ವೆಂಕಟರಮಣಯ್ಯ ಇಂದಿಗೆ ಎರಡು ವರ್ಷಗಳನ್ನು ಪೂರೈಸಿದ್ದಾರೆ.
ಅಪಕಾರನಹಳ್ಳಿ ಗ್ರಾಮದ ಬಡ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಟಿ.ವೆಂಕಟರಮಣಯ್ಯ,ಅಚ್ಚರಿ ಬೆಳವಣಿಗೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ಸ್ಥಾನದ ಅಭ್ಯರ್ಥಿಯಾಗಿದ್ದಲ್ಲದೆ ವಿಜೇತರಾದರು.
ಮೊದಲ ಸಲ ಶಾಸಕರಾಗಿ ಅನುಭವಿ ರಾಜಕಾರಣಿಯಂತೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವಿಶೇಷ ಅನುದಾನಗಳನ್ನು ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದು,ಎರಡನೆ ಅವಧಿಗೆ ಚುನಾಯಿತರಾಗಲು ಕಾರಣ.
ಎರಡನೆ ಅವಧಿಯಲ್ಲಿ ಸಮಿಶ್ರ ಸರ್ಕಾರದ ಗೊಂದಲ,ವಿರೋಧ ಪಕ್ಷದವರೆಂಬ ಆಡಳಿತ ಪಕ್ಷದ ನಿರ್ಲಕ್ಷ್ಯದ ನಡುವೆ ಎರಡನೇ ಅವಧಿಯ ಶಾಸಕರಾಗಿ ಎರಡು ವರ್ಷ ಪೂರ್ಣಗೊಳ್ಳುತ್ತಿದೆ.
ಹಿನ್ನೆಲೆ #ಹರಿತಲೇಖನಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ.
ಬಿಜೆಪಿ ಸರ್ಕಾರದಿಂದ ಅನುದಾನ ಕಡಿತ – ಟಿ.ವೆಂಕಟರಮಣಯ್ಯ
ತಾಲೂಕಿನ ಜನರ ಆಶೀರ್ವಾದದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮೊದಲ ಸಲ ಶಾಸಕನಾಗಿ ಸಾವಿರಾರು ಕೋಟಿ ಅನುದಾನ ತಂದು,ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.ಎರಡನೇ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರ ತಾಲೂಕಿನ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹರಿತಲೇಖನಿಗೆ ತಿಳಿಸಿದ್ದಾರೆ.
ನಿಮ್ಮ ಅಭಿಪ್ರಾಯವನ್ನು ಹೌದು ಅಥವಾ ಇಲ್ಲವೆಂದು ಕಾಮೆಂಟ್ ಮಾಡಿ ತಿಳಿಸಿ.