ದೊಡ್ಡಬಳ್ಳಾಪುರ (Doddaballapura): ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿ ಮಾಡಿ, ಮರು ದಿನ ರಾತ್ರಿ ಆತನ ಮನೆಗೆ ನುಗ್ಗಿ ಕಳ್ಳತನ ಮಾಡಿದ ಯುವಕನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿವರ
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಗ್ರಾಮದ ಫಕ್ರುದ್ದೀನ್ ಅವರು ಕುಟುಂಬ ಸಮೇತ ಹೊಸಕೋಟೆಗೆ ತೆರಳಿದ್ದ ವೇಳೆ, ಮನೆಯಲ್ಲಿ ಕಳ್ಳತನವಾಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆಗಳು ಕಳುವಾಗಿದ್ದವೆಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ಆರಂಭಿಸಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಸಿಬ್ಬಂದಿಗಳಾದ ಸುನೀಲ್ ಬಾಸಗಿ, ಸಚಿನ್ ಅವರ ತಂಡ ಆರೋಪಿಯನ್ನು ಬಂಧಿಸಿ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.
ಆಶ್ಚರ್ಯ ಏನೆಂದರೆ ಮನೆಯ ಮಾಲೀಕ ಫಕೃದ್ದಿನ ಮಗನ ಸ್ನೇಹಿತನಾದ ಮಹೇಶ್ ಎನ್ನುವವನೇ ಈ ಕೃತ್ಯದ ಆರೋಪಿ..!
ಈತ ಕೃತ್ಯ ನಡೆದ ಹಿಂದಿನ ದಿನ ರಾತ್ರಿ ಎಣ್ಣೆ ಪಾರ್ಟಿ ಮಾಡುವ ವೇಳೆ ಫಕೃದ್ಧೀನ್ ಕುಟುಂಬ ಹೊಸಕೋಟೆಗೆ ತೆರಳುವುದನ್ನು ತಿಳಿದು, ಮರು ದಿನ ರಾತ್ರಿ ಹೊಂಚು ಹಾಕಿ ಕಳ್ಳತನವೆಸಗಿ, ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯ ತನಿಖೆಯ ವೇಳೆ ತಿಳಿದು ಬಂದಿದ್ದು ಆರೋಪಿ ಮಹೇಶನ ಪೊಲೀಸರು ಬಂಧಿಸಿ, ಆತನಿಂದ ಸುಮಾರು 1ಲಕ್ಷ 35 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಸಾಧಿಕ್ ಪಾಷಾ ಅವರು ಫಕೃದ್ದಿ ಮತ್ತು ಆತನ ಮಡದಿಗೆ ಹಸ್ತಾಂತರ ಮಾಡಿದ್ದಾರೆ.