ದೊಡ್ಡಬಳ್ಳಾಪುರ ( Doddaballapura ): ನಗರದಲ್ಲಿಂದು 66/11 ಕೆವಿ ಅಪೇರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ F11-ರೈಲ್ವೇ ಸ್ಟೇಷನ್ ಫೀಡರ್‌ನ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ F11-ರೈಲ್ವೇ ಸ್ಟೇಷನ್ ಫೀಡರ್‌ನ ಮಾರ್ಗದಲ್ಲಿ ಇಂದು (ಏ. 08) ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವೆತ್ಯಾಸವಾಗಲಿದೆ ಎಂದು ದೊಡ್ಡಬಳ್ಳಾಪುರ ನಗರ ಬೆಸ್ಕಾಂ ಎಇಇ ವಿನಯ ಕುಮಾರ್ ಹೆಚ್ ಪಿ ಅವರು ತಿಳಿಸಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು
ಸೌಟ್‌ಕ್ಯಾಂಪ್ ರಸ್ತೆ, ರೈಲ್ವೆ ನಿಲ್ದಾಣ, ಕೆಂಪೇಗೌಡ ನಗರ, ರೈಲ್ವೆ ನಿಲ್ದಾಣ ಸರ್ಕಲ್, ಎಂ.ಎ.ಪ್ರಕಾಶ್ ಬಡಾವಣೆ, ಎಂ.ಜಿ.ಗಾರ್ಡನ್, ಶ್ರೀನಗರ, ಖಾಸ್‌ಬಾಗ್, ಚಂದ್ರಶೇಖರಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
(ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)