Daily story; ಕಾಡಿನ ಒಂದು ಮರದ ಮೇಲೆ ಒಂದು ಕೋಗಿಲೆ ವಾಸವಾಗಿತ್ತು. ಅದೇ ಮರದ ಮೇಲೆ ಬೇರೆ ಕೆಲವು ಪಕ್ಷಿಗಳು ವಾಸವಾಗಿದ್ದವು, ಕೋಗಿಲೆಗೆ ಖುಷಿಯಾದಾಗ ಅದು ಹಾಡುತ್ತಿತ್ತು.
ಇದರಿಂದ ಬೇರೆ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿತ್ತು. ಒಂದು ದಿನ ಎಲ್ಲ ಪಕ್ಷಿಗಳು ಸೇರಿ ಅದನ್ನು ಅಲ್ಲಿಂದ ಓಡಿಸಿದವು. ಅದು ಕಾಡಿನ ಹೊರಗೆ ಇರುವ ಒಂದು ಒಣಮರದ ಮೇಲೆ ಹೋಗಿ ಕುಳಿತುಕೊಂಡಿತು.
ಅಷ್ಟರಲ್ಲೇ ಮತ್ತೊಂದು ಕೋಗಿಲೆ ಅಲ್ಲಿಗೆ ಬಂತು. ತನ್ನ ಬಂಧುವೊಂದು ನಿರಾಶೆಯಿಂದ ಕುಳಿತಿರುವುದನ್ನು ಕಂಡು ಅದರ ನಿರಾಶೆಗೆ ಕಾರಣ ಏನೆಂದು ಕೇಳಿತು.
ಅದಕ್ಕೆ ಮೊದಲನೆಯ ಕೋಗಿಲೆ ನಾನು ಕಾಡಿನಲ್ಲಿರುವ ಒಂದು ಮರದ ಮೇಲೆ ವಾಸಿಸುತ್ತಿದ್ದೆ. ನನಗೆ ಖುಷಿಯಾದಾಗ ಹಾಡುತ್ತಿದ್ದೆ. ಒಂದು ದಿನ ಆ ಮರದ ಮೇಲೆ ವಾಸವಾಗಿದ್ದ ಬೇರೆ ಪಕ್ಷಿಗಳು ನೀನೇಕೆ ಹಾಡುವಿ ? ಎಂದು ಕೇಳಿದವು. ಅದಕ್ಕೆ ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ.
ಹಾಡದೇ ನಾನು ಬದುಕಿರಲಾರೆ ಎಂದು ಹೇಳಿದೆ. ಆಗ ಎಲ್ಲ ಪಕ್ಷಿಗಳು ಸೇರಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟವು ಎಂದು ಹೇಳಿತ್ತು . ಆಗ ಎರಡನೆಯ ಕೋಗಿಲೆ ನೀನು ಅವಕ್ಕೆ ತಪ್ಪು ಉತ್ತರ ಕೊಟ್ಟಿರುವೆ.
ಅದಕ್ಕೆ ಹಾಗಾಗಿದೆ ನಿನ್ನ ಉತ್ತರದಿಂದ ಅವು ನೀನೊಬ್ಬ ಸ್ವಾರ್ಥ. ನಿನ್ನ ಮೇಲೆ ನಿನಗೆ ನಿಯತ್ರಣವಿಲ್ಲ ಎಂದು ತಿಳಿದುಬಿಟ್ಟಿವೆ.
ನನಗೂ ಆ ಪಕ್ಷಿಗಳು ಅದೇ ಪ್ರಶ್ನೆಯನ್ನು ಕೇಳಿದ್ದವು. ಅದಕ್ಕೆ ನಾನು ನಾನು ನಿಮ್ಮನ್ನು ಖುಷಿಪಡಿಸುವದಕ್ಕಾಗಿ ಹಾಡುತ್ತೇನೆ ಎಂದು ಹೇಳಿದ್ದೆ.
ಆದ್ದರಿಂದ ನಾನು ಈಗಲೂ ಅವುಗಳ ಜೊತೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಹೇಳಿತು. ನಾವು ಆಡುವ ಮಾತು ತುಂಬ ಜಾಣ್ನೆಯಿಂದ ಕೊಡಿರಬೇಕು.
ಆದ್ದರಿಂದಲೇ ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹಿರಿಯರು ಹೇಳಿರುವುದು.
ಕೃಪೆ; ಕನ್ನಡ ದೀವಿಗೆ