ಕಲಬುರ್ಗಿ: ರೀಲ್ಸ್ ಗಾಗಿ ಇಬ್ಬರು ಯುವಕರು ನಡು ರಸ್ತೆಯಲ್ಲಿ ಕೊಲೆ ಮಾಡುವ ವಿಡಿಯೋವನ್ನು (Video) ಚಿತ್ರೀಕರಿಸಲು ಯತ್ನಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ನಗರದ ಹುಮ್ನಾಬಾದ್ ರಿಂಗ್ ರಸ್ತೆಯಲ್ಲಿ ಸಾಯಿಬಣ್ಣ ಮತ್ತು ಸಚಿನ್ ಎಂಬುವವರು ನಕಲಿ ರಕ್ತ, ಮೊಂಡಾದ ಆಯುಧ ಹಿಡಿದು ಭೀತಿ ಉಂಟು ಮಾಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವರದಿಯ ಪ್ರಕಾರ, ಆರೋಪಿ ಸಾಯಿಬಣ್ಣ ಕೂದಲೆಲ್ಲ ಕೆದರಿಕೊಂಡು ಸಚಿನ್ ಎಂಬನ ಮೇಲೆ ಕುಳಿತು ಮೊಂಡಾದ ವಸ್ತುವಿನಿಂದ ಕೊಲೆ ಮಾಡಿದಂತೆ ನಟಿಸಿದಲ್ಲದೆ, ನಕಲಿ ರಕ್ತವನ್ನು ಮೈಮೇಲೆ ಸುರಿದುಕೊಂಡು ರಸ್ತೆ ಇಡೀ ಚೆಲ್ಲಿದ್ದಾರೆ.
ಯುವಕರ ಈ ಹುಚ್ಚಾಟಕ್ಕೆ ಇಡೀ ನಗರ ಜನರೇ ಭಯಗೊಂಡಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.