ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿ ಕಾರು ಮತ್ತು ಮೊಪೆಡ್ ನಡುವೆ ಡಿಕ್ಕಿ (Accident) ಸಂಭವಿಸಿ, ಮೊಪೆಡ್ ಸವಾರ ಗಾಯಗೊಂಡಿದ್ದಾನೆ.
ಘಾಟಿ ಕ್ಷೇತ್ರದ ಸುಂಕ ವಸೂಲಿ ಕೇಂದ್ರದ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿ ವೇಳೆ ನೆಲಕ್ಕೆ ಬಿದ್ದ ಮೊಪೆಡ್ ಚಾಲಕನಿಗೆ ಮುಖ, ಕೈ ಕಾಲುಗಳಿಗೆ ಪೆಟ್ಟಾಗಿರುವ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದಿಂದಾಗಿ ಕಾರಿನ ಮುಂಭಾಗದ ಬಂಪರ್ ಹಾನಿಯಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.