ದೆಹಲಿ: ಚಿಕಾಗೋದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಹತ್ತು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ಚಿಕಾಗೋಗೆ ಮರಳಿದೆ. ವಿಮಾನದ ಈ ವಾಪಸ್ ಪಯಣಕ್ಕೆ ಶೌಚಾಲಯ ಸಮಸ್ಯೆ ಕಾರಣ ವಾಗಿದೆ ಎಂಬುದೇ ಅಚ್ಚರಿಗೆ ಕಾರಣವಾಗಿದ್ದು, ಈ ಕುರಿತು ಪ್ರಯಾಣಿಕರ ಪ್ರತಿಭಟನೆಯ ವಿಡಿಯೋ (Video) ವೈರಲ್ ಆಗಿದೆ.
ವಿಮಾನ ಚಿಕಾಗೋ ವಿಮಾನ ನಿಲ್ದಾಣಕ್ಕೆ ಮರಳಲು ತಾಂತ್ರಿಕ ದೋಷ ಕಾರಣ ಎಂದು ಏರ್ ಇಂಡಿಯ ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಆದರೆ ಪ್ರಯಾಣಿಕರು ಘಟನೆಗೆ ನೈಜ ಕಾರಣ ಶೌಚಾಲಯ ಸಮಸ್ಯೆ ಎಂದು ಸತ್ಯ ಹೊರಹಾಕಿದ್ದಾರೆ.
340 ಪ್ರಯಾಣಿಕರ ಬೋಯಿಂಗ್ ಸಾಮರ್ಥ್ಯದ 777-337 ವಿಮಾನದಲ್ಲಿ ಸಾಮಾನ್ಯ ದರ್ಜೆ, ಬಿಜಿನೆಸ್ ಕ್ಲಾಸ್ ಸೇರಿದಂತೆ 11 ಶೌಚಾಲಯಗಳಿವೆ. ಅದರಲ್ಲಿ 1 ಶೌಚಾಲಯ ಮಾತ್ರವೇ ಬಳಕೆಗೆ ಲಭ್ಯವಿತ್ತು.
14-15 ಗಂಟೆಗಳ ಪ್ರಯಾಣದಲ್ಲಿ ಅಷ್ಟೂ ಸಮಯ ನೈಸರ್ಗಿಕ ಕರೆಯನ್ನು ತಡೆದುಕೊಳ್ಳುವುದೇ ಪ್ರಯಾಣಿಕರಿಗೆ ಕಷ್ಟವಾಗಿದೆ. ಹಾಗಾಗಿ ಪ್ರಯಾಣಿಕರ ಒದ್ದಾಟ ನೋಡಲಾರದೇ ವಿಮಾನವವನ್ನು ಯರಳಿ ಚಿಕಾಗೊ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
ವಿಮಾನದಲ್ಲಿ ಒಂದು ಶೌಚಾಲಯ ಹೊರತುಪಡಿಸಿ ಉಳಿದೆಲ್ಲ ಶೌಚಾಲಯಗಳು ಮುಚ್ಚಿಹೋಗಿದ್ದು, ಬಳಕೆಗೆ ಲಭ್ಯವಿರಲಿಲ್ಲ. ಆದ ಕಾರಣ ಪ್ರಯಾಣಿಕರು 10 ಗಂಟೆಗಳ ಕಾಲ ತೊಂದರೆ ಅನುಭವಿಸಿದರು ಎಂದು ವರದಿಯಾಗಿದೆ.