ದೊಡ್ಡಬಳ್ಳಾಪುರ (Doddaballapura): ಶಿವನಿಗೆ ಪುಷ್ಪಗಳಲ್ಲಿ ಅತ್ಯಂತ ಪ್ರಿಯವಾದದ್ದು ಬಿಲ್ವಪತ್ರೆ ಎಂದು ಖಾನಿಮಠದ ಮಠ ಅಧ್ಯಕ್ಷ ಬಸವರಾಜ ಸ್ವಾಮೀಜಿಗಳು ಹೇಳಿದರು.
ಅವರು ಮಧುರೆ ಹೋಬಳಿ ವಡಗೆರೆ ಗ್ರಾಮದಲ್ಲಿ ಬಿಲ್ವ ಮರ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿವಪೂಜೆ ಮಾಡುವಾಗ ಬಿಲ್ವಪತ್ರೆಯನ್ನ ಶಿವನಿಗೆ ಅರ್ಪಿಸುವುದರಿಂದ ನಮ್ಮ ಪಾಪವು ಪರಿಹಾರವಾಗಿ, ಪುಣ್ಯ ಪ್ರಾಪ್ತಿಯಾಗುವುದು.
ಪೂಜೆಗೆ ಉಪಯೋಗಿಸುವ ಬಿಲ್ವಪತ್ರೆ ಮರವನ್ನ ದೀಕ್ಷೆ ಮಾಡುವುದರಿಂದ ಆ ಮರವು ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಹೇಳಿದರು.
ಪ್ರತಿ ಮನೆಯಲ್ಲಿಯೂ ಹಿರಿಯರು ಶಿವ ಪೂಜೆ ಮಾಡುವುದರ ಮೂಲಕ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಬೇಕು. ದೇವರಲ್ಲಿ ಭಕ್ತಿ ಹಿರಿಯರಲ್ಲಿ ಗೌರವ ಇವುಗಳನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮನೆಗಳಲ್ಲಿ ಹಿರಿಯರು ಮೂಡಿಸುವಂತೆ ಮಾದರಿಯಾಗಿರಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಊರಿನ ಎಲ್ಲಾ ದೇವತೆಗಳ ಮೆರವಣಿಗೆ ಹಾಗೂ ಪ್ರತಿ ಮನೆಯಿಂದಲೂ ಗಂಗೆಯನ್ನು ತಂದು ಬಿಲ್ವ ಮರದ ದೀಕ್ಷೆಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶಿಕ್ಷಕರಾದ ಕರಿಯಪ್ಪ, ನಾಗದೇವ್, ಬೆಟ್ಟಯ್ಯ, ಪ್ರಸನ್ ಕುಮಾರ್, ಜ್ಯೋತಿ ಕುಮಾರ್, ಶಿವಶಂಕರ್, ಸತ್ಯಾನಂದ ಮೂರ್ತಿ, ಸದಾನಂದ, ಪ್ರಕಾಶ್ ಇನ್ನು ಮುಂತಾದವರು ಭಾಗವಹಿಸಿದ್ದರು.