ದೊಡ್ಡಬಳ್ಳಾಪುರ: ನಗರದ ಅಪೇರಲ್ ಪಾರ್ಕ್ ಸಮೀಪದಲ್ಲಿರುವ ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಯ ಸೂರ್ಯ ಪದವಿ ಪೂರ್ವ ಕಾಲೇಜು, ಶ್ರೀರಾಮ ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ (Women’s Day) ಕಾರ್ಯಕ್ರಮ ಮಾರ್ಚ್ 8 ರಂದು ಬೆಳಿಗ್ಗೆ 12ಗಂಟೆಗೆ ನಡೆಯಲಿದೆ.
ಶ್ರೀರಾಮ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಮಾಲಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರಸಭೆ ಅಧ್ಯಕ್ಷೆ ಸಮಿತ್ರಾ ಆನಂದ್, ಸ್ತ್ರೀ ರೋಗ ತಜ್ಞೆ ಡಾ.ಶಾಲಿನಿ, ನಗರಸಭೆ ಮಾಜಿ ಅಧ್ಯಕ್ಷೆ ಶಾಂತಮ್ಮ, ವಿದುಷಿ ಶಾರದಾ ಶ್ರೀಧರ್, ರೈತ ಮಹಿಳೆ ಬಿ.ಮಂಜುಳ ಗುಂಡಸಂದ್ರ, ಮುಕ್ತಿಧಾಮದ ನಿರ್ವಾಹಕಿ ಲಕ್ಷ್ಮಮ್ಮ,ಬಾಲಕಿಯರ ವಸತಿ ನಿಲಯದ ಪಾಲಕರಾದ ರಾಧಾಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.