ದೊಡ್ಡಬಳ್ಳಾಪುರ, (Doddaballapura); ಪಾಳು ಬಾವಿಯಲ್ಲಿ ಅನುಮಾನಾಸ್ಪದ ಚೀಲವನ್ನು ಕಂಡ ಗ್ರಾಮಸ್ಥರು ಆತಂಕದ ಒಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ತಾಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ನಡೆದಿದೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಡಘಟ್ಟಮಡಗು ಗ್ರಾಮದಲ್ಲಿ ಕುರಿಯೊಂದು ಸಾವನಪ್ಪಿದ್ದು, ರೈತ ಅದನ್ನು ಚೀಲದಲ್ಲಿ ತುಂಬಿ ಪಾಳು ಬಾವಿಗೆ ಎಸೆದಿದ್ದಾನೆ.. ಆದರೆ ಈ ಚೀಲ ಕಂಡ ಗ್ರಾಮಸ್ಥರು ಯಾರದೋ ಶವ ಇದೆ ಎಂದು ಶಂಕೆ ಮೂಡಿ ಆತಂಕಪಡುವಂತೆ ಮಾಡಿತ್ತು.
ವಿಷಯ ತಿಳಿದ ಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾವಿಯಲ್ಲಿದ್ದ ಚೀಲವನ್ನ ಹೊರಗೆ ತೆಗೆದಿದ್ದಾರೆ.. ಬಳಿಕ ಚೀಲದಲ್ಲಿನ ವಸ್ತುವನ್ನು ಹೊರಗೆ ತೆಗೆದು ನೋಡಿದ್ದಾಗ ಸತ್ತ ಕುರಿ ಪತ್ತೆಯಾಗಿ, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.