ಕಲಬುರಗಿ: ಹೆಂಡತಿಯ ಕಿರುಕುಳಕ್ಕೆ ಬೇಸತ್ತ ಗಂಡನೊಬ್ಬ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಕಲಬುರಗಿಯ ಮಹಾದೇವ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಆಳಂದ ತಾಲೂಕಿನ 30 ವರ್ಷದ ರಾಕೇಶ್ ಆತ್ಮಹತ್ಯೆ ಮಾಡಿ ಕೊಂಡ ದುರ್ದೈವಿ.
6 ತಿಂಗಳ ಹಿಂದೆ ಮೇಘಾ ಎಂಬ ಯುವತಿಯನ್ನು ಮದುವೆಯಾಗಿದ್ದ ರಾಕೇಶ್, ಬಳಿಕ ಮನೆ ಕೆಲಸ ಸೇರಿದಂತೆ ಇತರ ವಿಷಯಗಳ ಕಾರಣಕ್ಕೆ ಪತ್ನಿಯ ಕಿರುಕುಳದಿಂದ ನೊಂದಿದ್ದ ಎನ್ನಲಾಗಿದೆ.
ಮೇಘಾ ಸೇರಿ ದಂತೆ ಹಲವರ ವಿರುದ್ಧ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಕೊಲೆಗೆ ಯತ್ನ
ಕಲಬುರಗಿ: ಹೆಂಡತಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಹೈದರಾಬಾದ್, ತಮಿಳುನಾಡು ಮುಂತಾದ ಕಡೆಗೆ ನಾನಾ ಹೆಸರುಗಳಿಂದ ತಲೆಮರಿಸಿ ಕೊಂಡಿದ್ದ ಆರೋಪಿ ಮೌಲಾಲಿ ಕಾನಾಗಡ್ಡನ 6 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೆಸರು ಬದಲಿಸಿ ಸರ್ಜಾಪುರದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ವಾಸವಾಗಿದ್ದ ಮೌಲಾಲಿಯನ್ನು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.