ದೊಡ್ಡಬಳ್ಳಾಪುರ (Doddaballapura); ನಗರದ ದರ್ಜಿಪೇಟೆಯಲ್ಲಿರುವ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಸಂತ ನಿಳೋಬ ಮಹಾರಾಜರ 91ನೇ ದಿಂಡಿ ಸಪ್ತಾಹ ಕಾರ್ಯಕ್ರಮ ಇಂದು ನಡೆಯಿತು.
ಇದರ ಅಂಗವಾಗಿ ಭಾನುದಾಸ ಸರ್ವದೆ ಬಂಕಾಪುರ ಅವರ ನೇತೃತ್ವದಲ್ಲಿ ಕೀರ್ತನೆ ಮತ್ತು ಪಂಡರಿ ಭಜನೆ ನಡೆಯಿತು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ನಂತರ ಸಂಜೆ ಪಾಡುರಂಗ ಸ್ವಾಮಿ ದಿಂಡಿ ಪಲ್ಲಕ್ಕಿ ಉತ್ಸವ ನೆರವೇರಿತು.