ದೊಡ್ಡಬಳ್ಳಾಪುರ (Doddaballapura): ವಿಶ್ವ ಹಿಂದು ಪರಿಷದ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದ ವತಿಯಿಂದ ಇಂದು ಸಂಜೆ ತುರ್ತು ಬೈಠಕ್ ಕರೆಯಲಾಗಿದೆ.
ಇಂದು (ಭಾನುವಾರ) ರಾತ್ರಿ 7 ಘಂಟೆಗೆ ನಗರದ ಬಸವಣ್ಣ ದೇವಾಲಯದ ಆವರಣದಲ್ಲಿ ಬೈಠಕ್ ಆಯೋಜಿಸಲಾಗಿದೆ.
ದೊಡ್ಡಬಳ್ಳಾಪುರ್ಲಿ ರಾಜ್ಯದ ಅತೀ ದೊಡ್ಡ ರಾಮೋತ್ಸವ ಮತ್ತು ಲಕ್ಷಾಂತರ ಹಿಂದುಗಳು ಒಂದೆಡೆ ಸೇರುವ ಬೃಹತ್ ಶ್ರೀರಾಮ ಶೋಭಾಯಾತ್ರೆಯ ದಿನಾಂಕವನ್ನು ನಿಶ್ಚಯ ಮಾಡಲು ಈ ತುರ್ತು ಬೈಠಕ್ ಕರೆಯಲಾಗಿದೆ ಎಂಬ ಕುತೂಹಲದ ಮಾತು ಕೇಳಿಬರುತ್ತಿದೆ.
ವಿಶ್ವ ಹಿಂದು ಪರಿಷದ್ ಬಜರಂಗದಳದ ಎಲ್ಲಾ ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳು, ಸಾರ್ವಜನಿಕರು ಈ ಬೈಠಕ್‌ನಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ.