ದೊಡ್ಡಬಳ್ಳಾಪುರ: ರೈತರ (farmer’s) ಮನೆಯ ಗಂಡು ಮಕ್ಕಳು ಹೆಣ್ಣುಗಳಿಗಾಗಿ ಯಾವ ಯಾವ ಪರಿಯ ಹರಕೆಗಳನ್ನು ತೀರಿಸುತ್ತಿದ್ದಾರೆ ಎನ್ನುವುದಕ್ಕು ಲೆಕ್ಕವೇ ಇಲ್ಲದಾಗಿದೆ.
ಪ್ರತಿ ವರ್ಷ ಶಿವರಾತ್ರಿ ಹಬ್ಬ ಮುಗಿದ ಮರುದಿನ ತಾಲ್ಲೂಕಿಗೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಐತಿಹಾಸಿಕ ನಂದಿ ರಥೋತ್ಸವ ಈ ಭಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
ರಥೋತ್ಸವದಲ್ಲಿ ಭಾಗವಹಿಸಿದ್ದ ಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಗ್ರಾಮದ ರೈತ ಕುಟುಂಬದ ಯುಕನೊಬ್ಬ ಬಾಳೆ ಹಣ್ಣಿನ ಮೇಲೆ ‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’ ಎಂದು ಬರೆದು ನಂದಿ ತೇರಿಗೆ ಅರ್ಪಿಸಿದ್ದಾನೆ.
ರೈತರ ಮಕ್ಕಳ ಹರಕೆಯನ್ನು ನಂದಿ ಈಡೇರಿಸುವಂತಾಗಲಿ ಎನ್ನುವುದು ಬಹುತೇಕ ರೈತ ಕುಟುಂಬದ ತಾಯಂದಿರ ಆಶಯವು ಆಗಿದೆ.