ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ YCP ಮುಖಂಡ ಪೊಸಾನಿ ಕೃಷ್ಣಮುರಳಿ ಅವರನ್ನು ಆಂಧ್ರದ ಪೊಲೀಸರು ಬಂಧಿಸಿದ್ದಾರೆ.
ರಾಯದುರ್ಗಂನಲ್ಲಿರುವ ಅವರ ನಿವಾಸದಲ್ಲಿ ಆಂಧ್ರದ ರಾಯಚೋಟಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಮತ್ತು ಸಿಎಂ ಪುತ್ರ ಲೋಕೇಶ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಡಿ ಕೃಷ್ಣ ಮುರಳಿ ವಿರುದ್ಧ ಆಂಧ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಈ ಹಿನ್ನೆಯಲ್ಲಿ ಪೊಲೀಸರು ಕೃಷ್ಣ ಅವರ ಮನೆಗೆ ನುಗ್ಗಿ ಬಂಧಿಸಿದ್ದು, ಅವರನ್ನು ಆಂಧ್ರ ಪ್ರದೇಶದ ಅನಂತಪುರಕ್ಕೆ ಕರೆದೊಯ್ಯಲಾಗಿದೆ.
ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಪೊಸಾನಿ ವಿರುದ್ಧ ಸೆಕ್ಷನ್ 196, 353(2), 111 ಜೊತೆಗೆ 3(5) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.