ಬೆಂ.ಗ್ರಾ.ಜಿಲ್ಲೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ದೇವನಹಳ್ಳಿ ತಾಲೂಕಿನ ವಿವಿಧ ಹೋಟೆಲ್ ಹಾಗೂ ಡಾಬಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿವೀಕ್ಷಣೆ ಮಾಡಿ ಸ್ವಚ್ಛತೆ ಹಾಗೂ ನೈರ್ಮಲ್ಯತೆ ಕಾಯ್ದುಕೊಳ್ಳದ 03 ಹೋಟೆಲ್, ಡಾಬಾಗಳಿಗೆ ನೋಟಿಸ್ ಜಾರಿಗೊಳಿಸಿ 7000 ರೂ.ಗಳ ದಂಡ ವಿಧಿಸಲಾಗಿದೆ.
ತಪಾಸಣೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತಾಧಿಕಾರಿ ಡಾ.ಧರ್ಮೇಂದ್ರ, ದೇವನಹಳ್ಳಿ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಭಾಗಿಯಾಗಿದ್ದರು.