Daily story: Birth of Lava Kusha

ಹರಿತಲೇಖನಿ ದಿನಕ್ಕೊಂದು ಕಥೆ: ಲವ ಕುಶರ ಜನನ

Daily story: ಲವ ರಾಮಾಯಣದಲ್ಲಿ ರಾಮನ ಮಗ. ಕುಶನ ಜೊತೆ ಹುಟ್ಟಿದನು. ಇವನು ಸ್ಥಾಪಿಸಿದ ಲವಪುರಿ (ಈಗಿನ ಪಾಕಿಸ್ತಾನದ ಲಾಹೋರ್) ನಗರವು ಲವನ ಹೆಸರಿನಿಂದ ಕರೆಯಲ್ಪಡುತ್ತಿದೆ.

ರಾಮಾಯಣವು ಪವಿತ್ರ ಗ್ರಂಥಗಳಲ್ಲಿ ಒಂದಾಗಿದ್ದು ರಾಮನ ಜೀವನಚರಿತ್ರೆಯನ್ನು ತಿಳಿಸುವ ಒಂದು ದಿವ್ಯವಾದ ಮಹಾಕಾವ್ಯವಾಗಿದೆ.

ರಾಮನು ಅಯೋಧ್ಯೆಯ ರಾಜ ದಶರಥ ಹಾಗೂ ರಾಣಿ‌ ಕೌಸಲ್ಯೆಯ ಅತ್ಯಂತ ಕರ್ತವ್ಯ ನಿಷ್ಠೆಯ ಹಾಗೂ ವಿಧೇಯ ಹಿರಿಯ ಮಗನಾಗಿದ್ದು ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಒಳ್ಳೆಯ ಮಾದರಿಯಾಗಿದ್ದ ಮತ್ತು ರಾವಣನೊಂದಿಗೆ ನಿರ್ಭೀತಿಯಿಂದ ಹೋರಾಡಿ ಜಯಗಳಿಸಿದವನೇ ಈ ಪುರುಷೋತ್ತಮ ಶ್ರೀರಾಮ.

ಇದರ ಜೊತೆಗೆ ಒಬ್ಬ ಆದರ್ಶ ಪತಿಯಾಗಿ ಹಾಗೂ ತಂದೆಯಾಗಿ ಆತನ ಪಾತ್ರವೇನು ಎಂಬುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಸೀತಾ ಅಪಹರಣಕ್ಕೆ ಒಳಗಾದಾಗ ಕೆರಳಿದ ರಾಮನು ಯುದ್ಧಕ್ಕೆ ತಯಾರಾಗುತ್ತಾನೆ. ರಾವಣನನ್ನು ಜಯಿಸಿ ಸೀತೆಯನ್ನು ಕರೆತರುತ್ತಾನೆ ಆದರೆ ಸಮಾಜದ ಕೆಲವು ನಿಂದನೆಯ ಮಾತುಗಳಿಂದ, ಲೋಕಾಪವಾದದಿಂದ ತಲೆತಗ್ಗಿಸುವ ಸಂದರ್ಭವು ರಾಮನಿಗೆ ಎದುರಾಗುತ್ತದೆ.

ಇದರಿಂದ ಸ್ವಲ್ಪ ಕಾಲ ಹೆಂಡತಿಯನ್ನು ತ್ಯಜಿಸುವ ಪ್ರಸಂಗವೂ ಶ್ರೀರಾಮನಿಗೆ ಒದಗಿ ಬರುತ್ತದೆ. ಹೀಗಾಗಿ ಆತನಿಗೆ ತನ್ನ ಪುತ್ರರ ಜನನದ ಬಗೆಗೂ ಮಾಹಿತಿ ಇರಲಿಲ್ಲ.

ಇಕ್ಷ್ವಾಕು ವಂಶವನ್ನು ರಾಜ ಇಕ್ಷ್ವಾಕು ಕಟ್ಟಿದ್ದಾನೆಂದು ರಾಮ ಹೇಳುತ್ತಾನೆ. ಇಕ್ಷ್ವಾಕು ಎಂದರೆ ‘ಕಬ್ಬು’ ಎಂದರ್ಥ. ಈ ವಂಶವನ್ನು ಸೂರ್ಯವಂಶವೆಂದು ಕರೆಯುತ್ತಾರೆ. ಇಕ್ಷ್ವಾಕು ವಿವಸ್ವನನ ಮೊಮ್ಮಗ ಹಾಗೂ ಮನುವಿನ ಮಗ. ಇವರು ಕೋಸಲ ರಾಜ್ಯವನ್ನು ಆಳಿದವರು.

ಪ್ರಸ್ತುತ ಇದನ್ನು ‘ಅವಧಾ’ಎಂದು ಕರೆಯಲಾಗುತ್ತದೆ. ಇದು ಉತ್ತರಪ್ರದೇಶದ ಸರಯೂ ಮತ್ತು ಸಾಕೇತ ಎಂಬ ನದಿಗಳ ತಟದಲ್ಲಿದೆ. ಪ್ರಸ್ತುತ ಅಯೋಧ್ಯೆಯು ಇದರ ರಾಜಧಾನಿಯಾಗಿದೆ.

ಹಿಂದೂ ಧರ್ಮದ ಧರ್ಮಶಾಸ್ತ್ರ ಅಥವಾ ಮನುಸ್ಮೃತಿಯನ್ನು ರಚಿಸಿದವರು ಇಕ್ಷ್ವಾಕು ರಾಜನ ತಂದೆ ಮನು. ಸತ್ಯಯುಗ ಅಥವಾ ಪ್ರಥಮ ಯುಗದ ಆರಂಭದಲ್ಲಿ ಇದೆ ಇಕ್ಷ್ವಾಕು ರಾಜನಾಗಿ ಆಳಿದ್ದನು.

ಒಮ್ಮೆ ರಾಮನು ತನ್ನ ಪತ್ನಿಯಾದ ಸೀತೆಯ ಪಾತಿವ್ರತ್ಯದ ಬಗ್ಗೆ ಲೋಕದ ಅಪವಾದವನ್ನು ಎದುರಿಸುವ ಪ್ರಸಂಗ ಎದುರಾಗುತ್ತದೆ. ಇದರಿಂದ ನೋವುಂಡ ಸೀತೆ ತನ್ನ ಪಾತಿವ್ರತ್ಯವನ್ನು ಪರೀಕ್ಷಿಸಲು ಅಗ್ನಿಪ್ರವೇಶ ಮಾಡಲು ಮುಂದಾಗುತ್ತಾಳೆ.

ಇದನ್ನು ಕೇಳಿದ ರಾಮ ದುಃಖಿತನಾಗುತ್ತಾನೆ. ಆದರೆ ತಾನೊಬ್ಬ ಆದರ್ಶ ರಾಜನೆಂಬುವುದನ್ನು ಸಾಬೀತುಪಡಿಸಲು ಶ್ರೀರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ.

ಕಾಡಿನಲ್ಲಿ ತನಗೊದಗಿದ ದುಸ್ಥಿತಿಗೆ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಯು ತನ್ನ ಆಶ್ರಮಕ್ಕೆ ಕರೆದೊಯ್ದು ಸಂತೈಸುತ್ತಾನೆ. ನಂತರ ಸೀತೆಯು ವಾಲ್ಮೀಕಿಯ ಆಶ್ರಮದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವಳಿ ಗಂಡು ಮಕ್ಕಳಿಗೆ ವಾಲ್ಮೀಕಿಯು ಹರ್ಷದಿಂದ ಲವ ಮತ್ತು ಕುಶ ಎಂದು ನಾಮಕರಣ ಮಾಡುತ್ತಾರೆ. ನಂತರ ಇಬ್ಬರೂ ಮಕ್ಕಳು ಆಶ್ರಮದಲ್ಲಿ ವಾಲ್ಮೀಕಿಯ ಆಶ್ರಯದಲ್ಲಿ ಬೆಳೆಯುತ್ತಾರೆ.

ಅವಳಿ ಮಕ್ಕಳ ಜನನವಾದ ನಂತರ ಮಹರ್ಷಿಯ ಶಿಷ್ಯರು ಮಕ್ಕಳನ್ನು ಪಿಶಾಚಿ ಮತ್ತು ರಾಕ್ಷಸರಿಂದ ರಕ್ಷಿಸಬೇಕಾಗಿದೆ ಎಂಬ ಮಾಹಿತಿಯನ್ನು ನೀಡುತ್ತಾರೆ. ಆದ್ದರಿಂದ ವಾಲ್ಮೀಕಿ ಮಹರ್ಷಿಯು ಒಂದು ಹುಲ್ಲನ್ನು (ಕುಶ) ಎರಡೂ (ಲವ)ಭಾಗಗಳಾಗಿ ಕತ್ತರಿಸಿ ಮಂತ್ರಗಳಿಂದ ಪವಿತ್ರಗೊಳಿಸುತ್ತಾರೆ.

ನಂತರ ಒಬ್ಬ ವೃದ್ದ ಹೆಂಗಸಿಗೆ ಹೇಳಿ ಹುಲ್ಲಿನ ಮೇಲಿನ ಭಾಗವನ್ನು ದೊಡ್ಡ ಮಗುವಿಗೂ, ಹುಲ್ಲಿನ ಕೆಳ ಭಾಗವನ್ನು ಸಣ್ಣ ಮಗುವಿನ ದೇಹಕ್ಕೂ ಉಜ್ಜುವಂತೆ ಹೇಳುತ್ತಾನೆ. ಈ ರೀತಿಯ ಪ್ರಕ್ರಿಯೆಯಿಂದಾಗಿ ಸೀತಾ ದೇವಿಯ ಈ ಅವಳಿ ಮಕ್ಕಳಿಗೆ ಲವ ಮತ್ತು ಕುಶ ಎಂಬ ಹೆಸರು ಬರುತ್ತದೆ.

ಲವ ಕುಶರು ಆಶ್ರಮದಲ್ಲಿ ಶ್ರೀರಾಮನ ಪ್ರತಿರೂಪದಂತೆ, ಆತನ ಸಚ್ಛಾರಿತ್ರ್ಯ, ಗುಣ, ನಡತೆಯಂತೆ ಬಾಳುತ್ತಾರೆ. ವಾಲ್ಮೀಕಿ ಮಹರ್ಷಿಯು ಕೂಡಾ ಅವರಿಬ್ಬರನ್ನು ತನ್ನ ಸ್ವಂತ ಮಕ್ಕಳಂತೆ ಜತನದಿಂದ ಬೆಳೆಸುತ್ತಾರೆ. ವಾಲ್ಮೀಕಿಯು ಈ ಮುದ್ದಾದ ಮಕ್ಕಳಿಗೆ ವೇದಗಳನ್ನೂ ಕಲಿಸುತ್ತಾನೆ.

ಲವ ಕುಶರಿಗೆ 12 ವರ್ಷವಾದಾಗ ಸ್ವತಃ ವಾಲ್ಮೀಕಿ ಮಹರ್ಷಿಯೇ ಉಪನಯನವನ್ನು ನೆರವೇರಿಸುತ್ತಾರೆ. ಈ ಮುಖಾಂತರ ಈ ಅವಳಿ ಮಕ್ಕಳಿಗೆ ವೇದಗಳ ಶಾಸ್ತ್ರವನ್ನು ಅಭ್ಯಸಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಬಿಲ್ಲು ಬಾಣದ ವಿದ್ಯೆಯನ್ನು ಕಲಿಸಲಾಗುತ್ತದೆ.

ಹೀಗಾಗಿ ಲವಕುಶರು ಆಶ್ರಮದಲ್ಲಿ ವೇದ ಪಾರಂಗತರಾಗಿಯೂ, ಬಿಲ್ವಿದ್ಯೆಯಲ್ಲೂ ಮೇಲುಗೈ ಸಾಧಿಸುತ್ತಾರೆ. ನಂತರ ವಾಲ್ಮೀಕಿಯು ತನ್ನ ತಪಸ್ಸಿನ ಅತೀಂದ್ರಿಯ ಶಕ್ತಿಯೊಂದಿಗೆ ಬಾಲಕರಿಗೆ ಕತ್ತಿ ಹಾಗೂ ಗುರಾಣಿಗಳನ್ನು ಒದಗಿಸುತ್ತಾನೆ.

ಒಮ್ಮೆ ವಾಲ್ಮೀಕಿ ಮಹರ್ಷಿಗಳಿಗೆ ಸಮುದ್ರ ದೇವರಾದ ವರುಣನಿಂದ‌ ಕರೆ ಬರುತ್ತದೆ. ಆಗ ವಾಲ್ಮೀಕಿಯು ಲವ ಕುಶವನ್ನು ಕರೆದು ಆಶ್ರಮವನ್ನು ಜತನದಿಂದ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾರೆ.

ರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯು ಪ್ರವರ್ಧಮಾನಕ್ಕೆ ಬಂದಂತಹ ಸಂದರ್ಭ ರಾಮನಿಗೆ ಮುಂದಿನ ಉತ್ತರಾಧಿಕಾರಿ ಯಾರೆಂಬುವುದರ ಬಗ್ಗೆ ಬಹಳ ಚಿಂತೆಯಾಗುತ್ತದೆ ಮತ್ತು ಸೀತಾದೇವಿಯ ನೆನಪು ರಾಮನನ್ನು ಬಿಡದೆ ಕಾಡಲಾರಂಭಿಸಿ ಚಿಂತಾಕ್ರಾಂತನಾಗುತ್ತಾನೆ.

ಹೀಗಿರುವಾಗ ರಾಮ ಅಶ್ವಮೇಧಯಾಗವನ್ನು ಮಾಡುತ್ತಾನೆ. ಯಾಗವನ್ನು ನೆರವೇರಿಸಿದ ನಂತರ ಕುದುರೆಯನ್ನು ರಾಜ್ಯ ಸುತ್ತಲು ಬಿಡುತ್ತಾರೆ. ಆ ಕುದುರೆ ಸುತ್ತಿದ ಊರುಗಳಲ್ಲಾ ರಾಜರ ಅಧೀನಕ್ಕೆ ಬರುತ್ತದೆ. ಯಾರಾದರೂ ಒಂದು ವೇಳೆ ಆ ಕುದುರೆಯನ್ನು ಸೋಲಿಸಿದರೆ ಆ ರಾಜ್ಯ ಅವರಿಗೆ ಸೇರುತ್ತದೆ.

ಹೀಗಾಗಿ ರಾಮನು ಅಶ್ವಮೇಧ ಯಾಗವನ್ನು ಮಾಡಿ ಕುದುರೆಯನ್ನು ಬಿಡುತ್ತಾನೆ. ಆ ಅಶ್ವಮೇಧದ ಕುದುರೆಯು ಬೇರೆ ಬೇರೆ ರಾಜ್ಯಕ್ಕೆ ಕಾಲಿಡುತ್ತದೆ. ಆದರೆ ಎಲ್ಲಾ ರಾಜ್ಯದ ರಾಜರು ರಾಮನಿಗೆ ಗೌರವವನ್ನು ಕೊಟ್ಟು ರಾಮನ ವಂಶಕ್ಕೆ ಸೇರಿಕೊಳ್ಳುತ್ತಾರೆ ಮತ್ತು ಅಶ್ವಮೇಧದ ಕುದುರೆಯು ಅಯೋಧ್ಯೆಗೆ ಹಿಂದಿರುಗುತ್ತದೆ.

ಹಿಂತಿರುಗಿ ಬರುವ ವೇಳೆ ಈ ಕುದುರೆಯು ಮಹರ್ಷಿಯ ಆಶ್ರಮಕ್ಕೆ ಬರುತ್ತದೆ. ಸುತ್ತಲೂ ಸೊಂಪಾದ ಹಸಿರು ಹುಲ್ಲನ್ನು ಕಂಡು ಅದರ ಮೇಲೆ ನಡೆಯಲಾರಂಭಿಸಿತು.

ಆ ವೇಳೆ ಲವನು ಆ ಕುದುರೆಯನ್ನು ನೋಡಿ ಕುದುರೆಯ ಪಕ್ಕ ಬಂದು ಅದರ ಹಣೆಯ ಮೇಲಿರುವ ಚಿನ್ನದ ಫಲಕವನ್ನು ನೋಡುತ್ತಾನೆ. ಅದರ ಮೇಲೆ ಬರೆದಿರುವ ಶಾಸನವನ್ನು ಓದಿ ಕುಪಿತಗೊಳ್ಳುತ್ತಾ‌ನೆ.

ಕೌಸಲ್ಯನ ಮಗ ರಾಮ ಒಬ್ಬನೇ ನಾಯಕನೇ? ಹಾಗಾದರೆ ನಾನು ಸೀತೆಯ ಮಗನಾಗಿ ಏನು ಉಪಯೋಗ..! ಎಂದು ಯೋಚಿಸಿ ಕುದುರೆಯನ್ನು ಮರಕ್ಕೆ ಕಟ್ಟಿ ಹಾಕುತ್ತಾನೆ.

ತದನಂತರ ಕುದುರೆಯನ್ನು ಮರಕ್ಕೆ ಕಟ್ಟಿದುದನ್ನು ಕಂಡು ಅಲ್ಲಿಗೆ ಸೈನಿಕರು ಆಗಮಿಸಿ ಬರುತ್ತಾರೆ. ತಮ್ಮ ಅಶ್ವಮೇಧದ ಕುದುರೆಯನ್ನು ಮರಕ್ಕೆ ಕಟ್ಟಿಹಾಕಿದುದನ್ನು ಕಂಡು ಸಿಟ್ಟಿಗೇಳುತ್ತಾರೆ ಮತ್ತು ಕುದುರೆಯನ್ನು ಕಟ್ಟಿದ ಲವನೆಡೆಗೆ ನೋಡಿ ಕುದುರೆಯನ್ನು ಬಿಚ್ಚುವಂತೆ ಆದೇಶಿಸುತ್ತಾರೆ. ಆದರೆ ಲವ ಕುದುರೆಯನ್ನು ಬಿಚ್ಚಲು ನಿರಾಕರಿಸುತ್ತಾನೆ.

ಸೈನಿಕ ಬಂದು ಕುದುರೆಯನ್ನು ಬಿಚ್ಚಿದಾಗ ಸಿಟ್ಟಿಗೆದ್ದ ಲವ ಆತನೆಡೆಗೆ ಬಾಣ ಹೂಡುತ್ತಾನೆ. ಇದರಿಂದ ಕುಪಿತಗೊಂಡ ಸೈನಿಕರು ಪ್ರತಿದಾಳಿ ಮಾಡುತ್ತಾರೆ. ಕೊನೆಗೆ ಶತ್ರುಘ್ನನ ದಾಳಿಯಿಂದ ಲವನು ಗಾಯಗೊಳ್ಳುತ್ತಾನೆ. ಆದರೂ ಲವನು ಶತ್ರುಘ್ನನನ್ನು ಗಾಯಗೊಳಿಸಿ ರಥವನ್ನು ಅಯೋಧ್ಯೆಗೆ ಕಳುಹಿಸುತ್ತಾನೆ.

ಸುದ್ದಿ ತಿಳಿದ ಕುಶನು ರಥವನ್ನು ಹಿಂಬಾಲಿಸಿ ಮತ್ತೆ ಯುದ್ದಕ್ಕೆ ಇಳಿಯುತ್ತಾನೆ. ಈ ವಿಚಾರವು ಶ್ರೀರಾಮನಿಗೆ ತಲುಪುತ್ತದೆ. ಶತ್ರುಘ್ನನು ಇಬ್ಬರು ಬಾಲಕರಿಂದ ಗಾಯಗೊಂಡಿದ್ದಾನೆ ಎಂಬ ವಿಚಾರ ಕೇಳಿ ತತ್ತರಿಸಿ ಹೋಗುತ್ತಾನೆ. ನಂತರ ಸಹಾಯಕ್ಕಾಗಿ ಲಕ್ಷ್ಮಣನನ್ನು ಕಳುಹಿಸುತ್ತಾನೆ. ಲಕ್ಷ್ಮಣನೊಂದಿಗೆ ಕಾದಾಡಿದ ಕುಶನು ಲಕ್ಷ್ಮಣನನ್ನು ಸೋಲಿಸುತ್ತಾನೆ.

ಆ ವೇಳೆ ಜನರು ಸೀತಾದೇವಿಯನ್ನು ಅನ್ಯಾಯವಾಗಿ ಕಾಡಿಗೆ ಕಳುಹಿಸಿದ ಪರಿಣಾಮ ಇದು ಶಾಪವೇ ಆಗಿರಬಹುದು ಎಂದು ಮತ್ತೆ ತಮ್ಮೊಳಗೆ ತಾವು ಮಾತನಾಡಿಕೊಳ್ಳುತ್ತಾರೆ.

ಇದನ್ನು ಗಮನಿಸಿದ ಶ್ರೀರಾಮನು ಮತ್ತೆ ಭಯಗೊಳ್ಳುತ್ತಾನೆ.ತದನಂತರ ಭರತ, ಹನುಮಂತ, ಜಾಂಬಾವಂತರೂ ಲವಕುಶರೊಂದಿಗೆ ಕಾದಾಡಿ ಸೋಲುತ್ತಾರೆ. ವಾಲ್ಮೀಕಿಯ ಬಾಣ ವಿದ್ಯೆ ಹಾಗೂ ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡ ಲವಕುಶರು ಬಹಳ ಧೈರ್ಯಶಾಲಿಗಳಾಗಿ ಸೆಣಸಾಡುತ್ತಾರೆ.

ವಾಲ್ಮೀಕಿ ಮಹರ್ಷಿ ಆಶ್ರಮದಲ್ಲಿ ಯುದ್ದ ನಡೆಯುತ್ತಿರುವ ವಿಚಾರ ಕೇಳಿ ವಾಲ್ಮೀಕಿಯು ಓಡೋಡಿ ಬಂದು ಪ್ರಜ್ಞೆ ತಪ್ಪಿ ಬಿದ್ದವರನ್ನು ಉಪಚರಿಸುತ್ತಾರೆ.

ನಂತರ ವಾಲ್ಮೀಕಿಯು “ಅಯ್ಯಾ… ರಾಜನೇ ನೀನು ಹೃದಯವಂತ. ಕಷ್ಟದಲ್ಲಿರುವವರನ್ನು ರಕ್ಷಿಸುವವನು. ಆದರೆ ದಯವಿಟ್ಟು ಕೋಪಗೊಳ್ಳಬೇಡಿ ಈ ಎರಡೂ ಮಕ್ಕಳು ನಿನ್ನ ಸುಪುತ್ರರು. ಇವರು ನಿಮ್ಮ ಪತ್ನಿ ಸೀತಾದೇವಿಗೆ ಜನಿಸಿದವರು.

ನಾನು ಆಶ್ರಮದಲ್ಲಿ ಇಲ್ಲದ ವೇಳೆ ಈ ಅರಿಯದ ಕಂದಮ್ಮಗಳು ಒಂದು ದೊಡ್ಡ ತಪ್ಪಿಗೆ ಕೈ ಹಾಕಿದ್ದಾರೆ. ಅವರನ್ನು ದಯವಿಟ್ಟು ಕ್ಷಮಿಸಿ” ಎನ್ನುತ್ತಾನೆ.

ನಂತರ ವಾಲ್ಮೀಕಿಯು ಲವಕುಶರನ್ನು ಸಮಾಧಾನಿಸಿ ಆಶ್ರಮಕ್ಕೆ ಕಳುಹಿಸುತ್ತಾನೆ. ನಂತರ ಒಂದು ವೀಣೆಯನ್ನು ತರಿಸಿ ರಾಮಾಯಣವನ್ನು ಹಾಡಲು ಹೇಳುತ್ತಾನೆ.

ಇದರಿಂದ ಸಂತೋಷಗೊಂಡ ರಾಮನು ತನ್ನಿಬ್ಬರು ಮಕ್ಕಳನ್ನು ಅರಮನೆಗ ಕರೆದೊಯ್ಯಲು ನಿರ್ಧರಿಸುತ್ತಾನೆ ಮತ್ತು ಸೀತಾದೇವಿಯಲ್ಲಿ ಕ್ಷಮೆಯನ್ನು ಕೇಳಿ ತನ್ನೊಂದಿಗೆ ಬರುವಂತೆ ಸೂಚಿಸುತ್ತಾನೆ.

ಆಗ ಸೀತೆಯು ” ತನ್ನ ಮಕ್ಕಳು ಅವರ ತಂದೆಯೊಂದಿಗೆ ಕ್ಷೇಮವಾಗಿರುವುದನ್ನು ನೋಡಲು ಬಯಸುತ್ತೇನೆ ಎನ್ನುತ್ತಾಳೆ,ನಾನು ನನ್ನ ತಾಯ್ನಾಡಿಗೆ ಮರಳಲು ಬಯಸುತ್ತೇನೆ” ಎನ್ನುತ್ತಾಳೆ.

ನಂತರ ತಾನು ತನ್ನ ಮೇಲಿರುವ ಕಳಂಕದಿಂದ ದೂರವಾಗಲು ಸೀತೆಯು ಭೂದೇವಿಯಲ್ಲಿ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎನ್ನುತ್ತಾಳೆ. ಎಲ್ಲರೂ ನೋಡುತ್ತಿದ್ದಂತೆಯೇ ಸೀತೆಯು ತಾಯಿಯಾದ ಭೂದೇವಿಯನ್ನು ಅಪ್ಪಿಕೊಂಡು ಭೂಮಿಯೊಳಗೆ ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ.

ಸೀತೆಯು ಭೂಗರ್ಭವನ್ನು ಸೇರಿದ ನಂತರ ರಾಮ ಅಯೋಧ್ಯೆಯನ್ನು 11000 ವರ್ಷಗಳವರೆಗೆ ಆಳುತ್ತಾನೆ (ಅಂದರೆ ಆತನ ಸಂಪೂರ್ಣ ಅಧಿಕಾರದ ಅವಧಿಯವರೆಗೆ) ಆತನ ನಿರ್ನಾಮದ ಸಮಯ ಹತ್ತಿರವಾಗುತ್ತಿದ್ದಂತೆ ಆತ ವಿಷ್ಣು ಸ್ವರೂಪವನ್ನು ತಾಳುತ್ತಾನೆ. ನಂತರ ಈ ಜಗತ್ತನ್ನು ತೊರೆದು ವೈಕುಂಠದಲ್ಲಿ ಭಗವತಿ ಲಕ್ಷ್ಮಿಯೊಂದಿಗೆ ಸರಯೂ ನದಿಯಲ್ಲಿ ಮುಳುಗುತ್ತಾನೆ.

ಲವ ಮತ್ತು ಕುಶರು ಉತ್ತರಕ್ಕೆ ಹೊರಟು ಅಲ್ಲಿ ಎರಡು ನಗರಗಳನ್ನುಕಂಡುಕೊಳ್ಳುತ್ತಾರೆ ಲಾಹೋರ್ (ಲವ ಈ ನಗರವನ್ನು ಕಂಡುಕೊಂಡಿದ್ದ ರಿಂದ ಈ ಹೆಸರು ಬಂತು) ಕಸೂರ್ ( ಕುಶ ಈ ನಗರವನ್ನು ಕಂಡುಕೊಂಡಿದ್ದರಿಂದ ಈ ಹೆಸರು ಬಂತು)ಲಾಹೋರ್ ಈಗಿನ ಪಾಕಿಸ್ತಾನದ ಒಂದು ಭಾಗ.

ಪಾಕಿಸ್ತಾನದ ಲಾಹೋರ್ ನ ಶಾಹಿ ಕಿಲಾದದ ಒಳಗೆ ಲವನಿಗೆ ಸಂಬಂಧಿಸಿದ ಒಂದು ದೇವಾಲಯವಿದೆ.

ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶನು ನಾಗ ರಾಜಕುಮಾರಿ ಕುಮುದತ್ತಿಳ ಸಹೋದರಿಯನ್ನು ವಿವಾಹವಾಗುತ್ತಾನೆ. ಜೊತೆಗೆ ದಕ್ಷಿಣದ ಮೇಲೆ ತನ್ನ ಹಿಡಿತವನ್ನು ಆತ ಸಾಧಿಸುತ್ತಾನೆ.

ಅದು ಈಗಿನ ಛತ್ತಿಸ್ಗಡ್ ಆಗಿದೆ. ಸೂರ್ಯವಂಶದ ರಜಪೂತ ವಂಶಸ್ತರು ಅಪಘಾನಿಸ್ತಾನ, ರಾಜಸ್ಥಾನ ಮತ್ತು ಪಾಕಿಸ್ತಾನದಲ್ಲಿ ಚದುರಿ ಹೋಗಿದ್ದಾರೆ. ಅವರು ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಚದುರಿಹೋದ ರಾಜಪುತ ಸೂರ್ಯವಂಶಸ್ಥರಾಗಿದ್ದರು.

ಅಂತಿಮವಾಗಿ ಅವರು ರೋಹ್ತಾಸ್‌ನಲ್ಲಿ ನೆಲೆಸಿದರು. ಪಾಟಲಿಪುತ್ರದ ನಂದ ವಂಶದ ಕೊನೆಯ ರಾಜ ಪದವನಂದ ಹಾಗೂ ಆತನ ನೇರ ವಂಶಸ್ಥನಾದ ಪರೀಕ್ಷಿತ (ಅರ್ಜುನನ ಮೊಮ್ಮಗ), ಕುಶ ಇವರೆಲ್ಲರೂ ಸೂರ್ಯ ವಂಶದವರು.

ಶ್ರೀರಾಮನಂತೆ ಆತನ ಮಕ್ಕಳಾದ ಲವ ಮತ್ತು ಕುಶರೆಂಬ ಇಬ್ಬರು ದಿಗ್ಗಜರಿಂದ ಆಳಲ್ಪಟ್ಟ ಸೂರ್ಯವಂಶ ಮಹೋನ್ನತಿಯನ್ನು ಸಾಧಿಸಿದರೂ ಅನಂತರ ಸೂರ್ಯವಂಶದಲ್ಲಿ ಅಂತಹ ಮಹಾತ್ಮರು ಆಳ್ವಿಕೆ ನಡೆಸಿದ ಬಗೆಗೆ ಮಾಹಿತಿಗಳಿಲ್ಲ.

ಅಲ್ಲದೆ ಕೆಲವು ಪುರಾಣಗಳು, ಮಹಾಭಾರತದ ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟ ಕುಶನಿಂದ ಹಿಡಿದು ಬೃಹಂದ್ಬಲನವರೆಗೆ ವಂಶಾವಳಿಯ ಪಟ್ಟಿಯನ್ನು ನೀಡುತ್ತದೆ. ಈ ಪಟ್ಟಿಯನ್ನು ರಘುವಂಶದಿಂದ ಅಗ್ನಿವರ್ಣದವರೆಗೆ ದೃಢೀಕರಿಸಲಾಗಿದೆ.

ಹಾಗೆಯೇ ಪುರಾಣಗಳು ಬೃಹಂದಳನಿಂದ ಹಿಡಿದು ಕೊನೆಯ ರಾಜನಾದ ಸುಮಿತ್ರನವರೆಗೆ ರಾಜರುಗಳ ಪಟ್ಟಿಯನ್ನು ಕೂಡ ನೀಡುತ್ತದೆ. ಆದರೆ ಈ ಪಟ್ಟಿಯಲ್ಲಿ ಶಕ್ಯ, ಸಿದ್ಧಾರ್ಥ ಮತ್ತು ರಾಹುಲರನ್ನು ಸಂಜಯ, ಪ್ರಸೇನಜಿತನ ನಡುವೆ ವೈಯಕ್ತಿಕವಾಗಿ ಗುರುತಿಸಲ್ಪಡುತ್ತದೆ.

ಅಯೋಧ್ಯೆಯ ಇನ್ನೋರ್ವ ರಾಜ ಅಹಿನಾ ನಾಗನು ಒಬ್ಬ ಒಳ್ಳೆಯ ರಾಜನಾಗಿದ್ದು ಭವ್ಯಆಳ್ವಿಕೆಯನ್ನು ನಡೆಸುತ್ತಿದ್ದನು ಎಂಬ ಉಲ್ಲೇಖವು ಪಾಲಿ ಮೂಲಗಳಿಂದ ತಿಳಿಯುತ್ತದೆ.ಮತ್ತು ಅಹಿನಾ ನಾಗ ಎಂಬ ರಾಜನ‌ ಆಡಳಿತದ ಬಗ್ಗೆ ಬುದ್ದನ ಸಾಹಿತ್ಯದಲ್ಲೂ ಕೂಡಾ ಕಂಡುಬಂದಿದೆ‌ ಎಂದು ಮೂಲಗಳು ತಿಳಿಸಿವೆ.

ಬುದ್ಧನ ತಂದೆ ಶುದ್ಧೋದನ. ಬುದ್ಧ ಸಿಂಹಾಸನವನ್ನು ತ್ಯಜಿಸಿ ನಂತರ ಅವನ ಮಗ ರಾಹುಲನಿಂದ ಅವನ‌ ವಂಶಾವಳಿ ಮುಂದುವರಿಯಿತು ಎಂದು ಭವಿಷ್ಯ ಪುರಾಣವು ಹೇಳುತ್ತದೆ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಹೆಸರು ಲಭ್ಯವಿಲ್ಲ)

ರಾಜಕೀಯ

ಕರ್ನಾಟಕದ ರೇಲ್ವೆ ಯೋಜನೆಗಳಿಗೆ ವೇಗ ನೀಡಲು ಕೇಂದ್ರವನ್ನು ಒತ್ತಾಯಿಸಿದ ಹೆಚ್.ಡಿ.ದೇವೇಗೌಡ

ಕರ್ನಾಟಕದ ರೇಲ್ವೆ ಯೋಜನೆಗಳಿಗೆ ವೇಗ ನೀಡಲು ಕೇಂದ್ರವನ್ನು ಒತ್ತಾಯಿಸಿದ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ರೇಲ್ವೆ

[ccc_my_favorite_select_button post_id="104046"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60 ವರ್ಷ), ಭರತ್ (35 ವರ್ಷ) ಆತ್ಮಹತ್ಯೆಗೆ ಶರಣಾದ ತಾಯಿ-ಮಗ ಎಂದು ಗುರುತಿಸಲಾಗಿದೆ. ಭರತ್ ಕಳೆದ

[ccc_my_favorite_select_button post_id="104008"]
Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರ

Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ತಾಲೂಕಿನ ಅಪಘಾತ (Accident) ಪ್ರಕರಣಗಳು ಸಂಖ್ಯೆ ಒಂದೇ ಸಮನೇ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಇಂದು ಬೆಳಗ್ಗೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ಮೂರು ಅಪಘಾತಗಳು ವರದಿಯಾಗಿದ್ದು, ಓರ್ವ ಸಾವನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಇದೀಗ ಕೆಲವು

[ccc_my_favorite_select_button post_id="104042"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!