ಬೆಳಗಾವಿ: ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿ ಅವರನ್ನು ಬದಲಿಸಿ, ಚಂದ್ರಬಾಬು ನಾಯ್ಡು (Chandrababu naidu), ನಿತಿನ್ ಗಡ್ಕರಿ ಅವರನ್ನು ಮಾಡಲು ಚರ್ಚೆ ನಡೆಯುತ್ತಿದೆ.. ಅದರ ಬಗ್ಗೆ ಕೂಡ ಪ್ರಶ್ನೆ ಕೇಳಬೇಕಲ್ವಾ..? ಅದುನ್ ಯಾಕ್ ಕೇಳಲ್ಲ ಎಂದು ಸಚಿವ ಸಂತೋಷ್ ಲಾಡ್ (Santosh lad) ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಹೀಗೆ ತಿರುಗೇಟು ನೀಡಿದರು.
ಈ ಸರ್ಕಾರ ಆರಂಭವಾದ ಮೂರು ತಿಂಗಳಿಂದನೇ ಸಿದ್ದರಾಮಯ್ಯ ಅವರ ಬದಲಾವಣೆ ಅಂತ ಪ್ರಶ್ನೆ ಶುರು ಮಾಡುದ್ರಿ, ಇದುವರೆಗೂ ಅಂತದೇನು ಆಗಿಲ್ಲ.
ನನಗೂ ಮಾಹಿತಿ ಬಂದಿದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಂಕಟ ಇದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ದ ಬಿಜೆಪಿ ಸಚಿವರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಪ್ರಧಾನಿ ಸ್ಥಾನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬದಲಿಸಬಹುದು ಎನ್ನಲಾಗುತ್ತಿದೆ. ಇದರ ಬಗ್ಗೆ ಯಾಕ್ ನೀವ್ ಪ್ರಶ್ನೆ ಮಾಡಲ್ಲ, ಜನರಿಗೆ ತಿಳಿಸಲ್ಲ.? ಕೇಳಬೇಕಲ್ವಾ..? ವರದಿ ಮಾಡಬೇಕಲ್ವಾ.?
ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹಾಗಾಗಿ ಪ್ರಧಾನಿ ಮೋದಿ ಬದಲಾವಣೆ ಆಗಬಹುದು ಎಂಬ ಚರ್ಚೆ ಇದೆ. ಈ ಬಗ್ಗೆಯೂ ನೀವು ಕೇಳಬೇಕಲ್ವಾ ಎಂದರು.
ಬಿಜೆಪಿ ಮುಖಂಡರಲ್ಲಿ ಮನವಿ ಮಾಡ್ತಿವಿ, 11 ವರ್ಷ ವಿಶ್ವಗುರು ನೋಡ್ಬಿಟ್ಟಿದ್ದೀವಜ. ಅವರನ್ನು ಕೆಳಗಿಳಿಸಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ ಅವರನ್ನು ಪ್ರಧಾನಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ.
ಯಾರೋ ಒಬ್ಬರು ಕೆಲಸ ಮಾಡಿ, ಜನರಿಗೆ ಒಳ್ಳೇದ್ ಮಾಡಿ, ದೇಶವನ್ನು ಮುಂದೆ ತರುವಂತಹ ಕೆಲಸ ಮಾಡಬೇಕು ಎಂದರು.