ನವದೆಹಲಿ: ಕೈದಿಗಳಂತೆ ಭಾರತೀಯರನ್ನು ಅಮಾನಿಸಿರುವ ಅಮೇರಿಕಾ ವಿರುದ್ಧ ಪ್ರತಿರೋಧ ತೋರಲು ಯುಎಸ್ ಪ್ರವಾಸ ರದ್ದು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿ ಮಿತ್ರ ಟ್ರಂಪ್ ಅಮೇರಿಕಾ ಅಧ್ಯಕ್ಷ ಆದ ನಂತರ ಕಠಿಣ ನಿಯಮ ಜಾರಿಗೆ ತಂದು ನೂರಾರು ಭಾರತೀಯರನ್ನು ಅಕ್ರಮ ವಲಸಿಗರು ಎಂಬದು ಗಡಿಪಾರು ಮಾಡಿದೆ.
ಈ ವೇಳೆ ಅಲ್ಲಿನ ಸೇನಾ ಅಧಿಕಾರಿಗಳು ಭಾರತಿಯರಿಗೆ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳಗಳನ್ನು ಹಾಕಿ, ಕೈದಿಗಳು ಎಂಬಂತೆ ಚಿತ್ರಿಸಿ ದೇಶದಿಂದ ಹೊರದಬ್ಬಿರುವ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೆ, ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಸಮರ್ಥನೆ ಮಾಡುತ್ತಿದ್ದಾರೆ.
ಆದರೆ ಇದೀಗ ಪ್ರಧಾನಿ ಮೋದಿಗೆ ಮೊಗ್ಗಲ ಮುಳ್ಳಾಗಿ ಚುಚ್ಚುತ್ತಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು, ಭಾರತೀಯರಿಗೆ ಅವಮಾನ ಮಾಡಿರುವ ಅಮೆರಿಕ ಭೇಟಿಯನ್ನು ಪ್ರಧಾನಿ ಮೋದಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬರೆದಿರುವ ಸುಬ್ರಮಣಿಯನ್, ಅಮೆರಿಕದಲ್ಲಿ ದಶಕಗಳಿಂದ ವಾಸವಾಗಿರುವ ಭಾರತೀಯ ನಿವಾಸಿಗಳ ಬಗ್ಗೆ ಅಮೆರಿಕ ನಡೆಸುತ್ತಿರುವ ಅನಾಗರಿಕ ವರ್ತನೆಯ ವಿರುದ್ಧ ಪ್ರತಿಭಟಿಸಲು ದುರ್ಬಲ ಮೋದಿ ಅವರು ತಮ್ಮ ಸನ್ನಿಹಿತ ಯುಎಸ್ ಭೇಟಿಯನ್ನು ರದ್ದುಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಅಲ್ಲದೆ ಬಿಜೆಪಿಯ ಐಟಿ ಸೆಲ್ ಭಾರತೀಯರ ಕೈಕೋಳ ಮತ್ತು ಸರಪಳಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಅದಾನಿಯನ್ನು ಬಹುಪಾಲುಗಳಿಂದ ರಕ್ಷಿಸಲು ಮೋದಿಗೆ ಸಹಾಯ ಮಾಡಿದರೆ ಅದು ಸಹ ಭಾರತೀಯರನ್ನು ಅಪಹಾಸ್ಯ ಮಾಡುತ್ತದೆ ಎಂದಿರುವ ಟ್ವಿಟ್ಗೆ ಉತ್ತರ ನೀಡಿ, ಬಿಜೆಪಿ ಐಟಿ ಸೆಲ್ಗೆ ಪೊಲೀಸ್ ಬೇಡಿ ತೋಡಿಸುವುದಾಗಿ ಹೇಳಿದ್ದಾರೆ.