ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸುವಂತೆ ಪಟ್ಟು ಹಿಡಿದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patila Yatnal) ನವದೆಹಲಿ ಭೇಟಿ ಬಳಿಕ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ವೇಳೆ ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಹರಿಹಾಯ್ದ ಅವರು, ದೆಲ್ಲಿಯಲ್ಲಿ ಭಾರಿ ಅಪಮಾನ ಆಗಿದೆ ನಮಗೆ, ಯಾರೂ ಭೇಟಿಯಾಗಿಲ್ಲ ಹೈಕಮಾಂಡ್, ಭಯಂಕರ ಭಾರಿ ಅಪಮಾನ.. ಈ ರೀತಿಯ ವಿಜಯೇಂದ್ರ ಪ್ರೇರಿತ ಲೇಖನಗಳನ್ನು ಖಂಡಿಸುತ್ತೇನೆ.
ಇದೆಲ್ಲ ಬಿಡ್ರಿ ಮಾದ್ಯಮದೋರು ವಿಜಯೇಂದ್ರನ ಪರವಾಗಿ ಭಾರಿ ಅಪಮಾನವಾಗಿದೆ.. ಯತ್ನಾಳ್ ನ ಯಾರೂ ಭೇಟಿಯಾಗಲ್ಲ ಅಂದ್ರೂ.. ಹುಷಾರ್ ಅಂದ್ರೂ ಇದೆಲ್ಲ ಕಂಪನಿ ಬಂದ್ ಮಾಡಿ ನಿಮ್ದು, ಏನೂ ಆಗಿಲ್ಲ ನಮಗೆ ಭಾರಿ ಗಟ್ಟಿಯಾಗಿ ಇದ್ದೇವೆ.
ಯಾರೂ ಗಾಬರಿ ಆಗುವಂತದ್ ಇಲ್ಲ.. ನಮಗೇನು ಅಪಮಾನ ಆಗಿಲ್ಲ, ಕೈಗೇನು ಸುಂಕ ಇಲ್ಲ ಅಂದಿದ್ದಾರೆ ಯಾವ್ದೋ ಖಾಸಗಿ ಚಾನಲ್.. ಯಾವ ಸುಡಿಗಾಡು ಇಲ್ಲ. ಬಂಗಾರ ಇಟ್ಕೊಂಡ್, ವಿಜಯದ ಸಂಕೇತ ಇಟ್ಕೊಂಡ್ ದೆಹಲಿಯಿಂದ ಬಂದಿದ್ದೇವೆ.
ದೆಹಲಿಯಲ್ಲಿ ವಿಜಯದ ಲಕ್ಷಣಗಳು ಕಾಣಿಸಿವೆ. ಯಾರಾದ್ರೂ ಮಾದ್ಯಮದವರು ನಮ್ಮ ವಿರುದ್ಧ ಈ ರೀತಿ ಅಪಮಾನ ಮಾಡುವಂತೆ ಮಾಡಿದ್ರೆ ಖಂಡನೀಯ.
ನಮ್ಮ ಭೇಟಿಗೆ ಕೇಂದ್ರ ನಾಯಕರು ಸ್ಪಂದಿಸಿದ್ದಾರೆ. ದೇಶಕ್ಕೆ ಮೋದಿ ಹೇಗೆ ಅಗತ್ಯವೋ, ಉತ್ತರ ಪ್ರದೇಶಕ್ಕೆ ಸಿಎಂ ಯೋಗಿ ಅವಶ್ಯವಿದೆ. ಅದರಂತೆಯೇ ರಾಜ್ಯಕ್ಕೂ ಉತ್ತಮ ನಾಯಕ ಸಿಗಲಿದ್ದಾರೆ ಕಾದು ನೋಡಿ ಎಂದು ಸುಳಿವು ನೀಡಿದರು.
ವರಿಷ್ಠರು ನಮಗೆ ಏನು ಹೇಳಬೇಕೋ ಅದನ್ನ ಹೇಳಿದ್ದಾರೆ. ಕೇಂದ್ರದ ನಾಯಕರು ನಮಗೆ ಸ್ಪಂದಿಸಿದ್ದಾರೆ. ಯಾರ ಭೇಟಿ ಎಂಬುದು ಗುಪ್ತವಾಗಿಡುವಂತೆ ಹೇಳಿದ್ದಾರೆ. ವಿಜಯೇಂದ್ರ ವಿರೋಧಿ ಬಣ ದಿನದಿಂದ ದಿನ ಹೆಚ್ಚುತ್ತಿದೆ.
ಎಲ್ಲರ ಮನಸ್ಸಿನಲ್ಲೂ ವಿಜಯೇಂದ್ರ ಬೇಡ ಅಂತ ಇದೆ. ವಿಜಯೇಂದ್ರ ಅಪ್ರಬುದ್ಧ. ಅವರ ಅಪ್ಪ ಸಿಎಂ ಆಗಿದ್ದ ವೇಳೆ ವಸೂಲಿ ಮಾಡಿದ್ದಾರೆ. ವಿಜಯೇಂದ್ರ ಸುಮ್ಮನಿರಲಿ ಎಂದು ವಾಗ್ದಾಳಿ ಮಾಡಿದ್ದಾರೆ.