ದೊಡ್ಡಬಳ್ಳಾಪುರ (Doddaballapura): ನಿನ್ನೆ ತಾಲೂಕಿನ ಪ್ರಸಿದ್ದ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ 44ನೇ ವಾರ್ಷಿಕ ಮಹಾ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆದಿದೆ.
ರಥೋತ್ಸವದಲ್ಲಿ ವಿವಿದೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಭಾಗವಹಿಸಿ, ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದಿದ್ದಾರೆ.
ರಥೋತ್ಸವದಲ್ಲಿ ಭಾಗವಹಿಸಿದ್ದ ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತಗಳು ಮೆರುಗು ನೀಡಿವೆ.
ಈ ಅದ್ದೂರಿ ಜಾತ್ರೆ ನೋಡಲೆಂದು ಬಂದಿದ್ದ ದೊಡ್ಡಬೆಳವಂಗಲದ ರತ್ನಮ್ಮ ಅವರ ಮೊಬೈಲ್ ಅನ್ನು ಜನಜಂಗುಳಿಯಲ್ಲಿ ಕಳೆದುಕಡಿದ್ದಾರೆ.
ಜಾತ್ರೆಯನ್ನು ನೋಡುವ ಧಾವಂತದಲ್ಲಿ ಪರ್ಸನಲ್ಲಿಟ್ಟಿದ್ದ ಮೊಬೈಲ್ ಕಳೆದು ಹೋಗದೆ.
ಪರ್ಸ್ ಕಂಡ ಜಾತ್ರೆಗೆ ಬಂದ ಭಕ್ತರು ದೊಡ್ಡಬೆಳವಂಗಲ ಪೊಲೀಸರಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಂದು ರತ್ನಮ್ಮ ಮನೆಯವರು ಕರೆ ಮಾಡಿದಾಗ ಮೊಬೈಲ್ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಇರುವುದು ಪತ್ತೆಯಾಗಿದ್ದು, ಎಎಸ್‌ಐ ಬಸವರಾಜು ಅವರು ರತ್ನಮ್ಮ ಅವರಿಗೆ ನೀಡಿದ್ದಾರೆ.