ಬೆಂಗಳೂರು: ರಾಜ್ಯದ ಅಧ್ಯಕ್ಷನಾಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ, ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರುಗಳ ನೇಮಕಾತಿಯಲ್ಲಿ ವಿಜಯೇಂದ್ರ (BY Vijayendra) ಹಸ್ತಕ್ಷೇಪ ಮಾಡಿದ್ದಾರೆ, ನಮ್ಮ ಮಾತು ಪರಿಗಣಿಸಿಲ್ಲ ಎಂದು ಸಂಸದ ಡಾ.ಕೆ ಸುಧಾಕರ್ (Dr K Sudhakar) ಅವರು ಆರೋಪದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಅಧ್ಯಕ್ಷನಾಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ, ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚುನಾವಣಾಧಿಕಾರಿ ಆಗಿದ್ರು, 13 ಜನ ವೀಕ್ಷಕರು ಇದ್ರು ಎಂದರು.
ಇವ್ರು ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆಗೆ ತಲಾ ಮೂರು ಹೆಸರು ದೆಹಲಿ ಹೈಕಮಾಂಡ್ ಗೆ ಕಳಿಸಿಕೊಟ್ಟಿದ್ರು, ಅಲ್ಲಿಂದ ಅಂತಿಮವಾಗಿ ಬಂದ ಪಟ್ಟಿ ಘೋಷಣೆಯಾಗಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ ಎಂದರು.
ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ.
ಅವರು ಹಿರಿಯರು ಹೀಗೆಲ್ಲ ಮಾತಾಡಬಾರದು
ಸುಧಾಕರ್ ಅವರ ಆಕ್ರೋಶದ ಮಾತುಗಳನ್ನು ಕೇಳಿದ್ದೇ, ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ, ಸುಧಾಕರ್ ಅವರು ಹಿರಿಯರು ಹೀಗೆಲ್ಲ ಮಾತಾಡಬಾರದು ಎಂದರು.
ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ. ಸುಧಾಕರ್ ಅವರು ಹಾಗೆಲ್ಲಮಾತಾಡಬಾರದು ಅಂತ ಆಗ್ರಹ ಮಾಡಲ್ಲ, ಮನವಿ ಮಾಡ್ತೇನೆ.
ಸುಧಾಕರ್ ಸೇರಿದಂತೆ ಅನೇಕರ ಸಲಹೆಯಂತೆ ಅವರಿಗೆ ಹೇಗ್ ಬೇಕೋ ಹಾಗೆ ನಾನು ಬದಲಾಗಲು ಪ್ರಯತ್ನ ಮಾಡ್ತೇನೆ.. ನಾನು ಸುಧಾಕರ್ ಅವರನ್ನೂ ಭೇಟಿ ಮಾಡ್ತೇನೆ, ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ, ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳ್ಕೋಬಾರದು ಅಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದರು.
ಪಕ್ಷ ನನ್ನ ಸ್ವತ್ತು ಅಲ್ಲ
ಸುಧಾಕರ್ ಆಕ್ರೋಶದ ಮಾತಾಡಿದ್ದಾರೆ. ಅವರು ಹಾಗೆಲ್ಲ ಮಾತಾಡೋದು ಅವರಿಗೂ ಗೌರವ ಸಿಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಸುಧಾಕರ್ ಆಥರ ಎಲ್ಲಾ ಮಾತಾಡಬಾರದು, ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡ್ತಿಲ್ಲ, ಸುಧಾಕರ್ ಹಾಗೆಲ್ಲ ಮಾತಾಡಬಾರದು.
ಆತ ಕೂಡ ಸುಧಾಕರ್ (Sudhakar) ಜಿಲ್ಲೆಯಲ್ಲಿ ಗೆದ್ದಿರೋರೂ ಒಬ್ಬ ಕಾರ್ಯಕರ್ತರೇ, ಅವರು ಸುಧಾಕರ್ ಸಂಬಂಧಿಯೂ ಹೌದು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ. ಯಾವ ಜಿಲ್ಲೆಯಲ್ಲೂ ನನ್ನ ಪಾತ್ರ ಇಲ್ಲ ಎಂದರು.
ಶ್ರೀರಾಮುಲು (sreeramulu) ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಶ್ರೀರಾಮುಲು ಅವರು ಹಿರಿಯರು. ಸಚಿವರಾಗಿ, ಹಿರಿಯರಾಗಿ ಪಕ್ಷಕ್ಕೆ ಅವರದ್ದೇ ಆದ ಶಕ್ತಿ ತುಂಬಿದ್ದಾರೆ. ಕೋರ್ ಕಮಿಟಿ ಆದ ನಂತರ ನಾನೂ ಮಾತಾಡಿದ್ದೇನೆ.
ಕೋರ್ ಕಮಿಟಿಯಲ್ಲಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದು ಅಂತ ಅವರಿಗೆ ಮನವಿ ಮಾಡಿದ್ದೇನೆ. ಏನೇ ಇದ್ರೂ ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ ಅಂದಿದ್ದೇನೆ ಎಂದರು.
ನಾಳೆ ಯತ್ನಾಳ್ (Yatnal) ಹಾಗೂ ಟೀಮ್ ಸಭೆ ಹಾಗೂ ರಾಜ್ಯಾಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ಎಂದರು.