An angry Dr. Sudhakar.. A cold Vijayendra

ತಾರಕಕ್ಕೇರಿದ ಬಿಜೆಪಿ ಬಣ ಬಡಿದಾಟ.. ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಂಸದ ಡಾ.ಕೆ ಸುಧಾಕರ್‌

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ತಾರಕಕ್ಕೇರಿದೆ. ಸಂಸದ ಡಾ.ಕೆ.ಸುಧಾಕರ್‌ (Dr K Sudhakar) ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ವರಿಷ್ಠರಿಗೆ ದೂರನ್ನು ನೀಡಲು ಮುಂದಾಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರದ ಸಂಸದ ಡಾ ಕೆ ಸುಧಾಕರ್, 2019ರಲ್ಲಿ ಬಿಜೆಪಿಗೆ‌ ಮರಳು ಭೂಮಿಯಂತ ವಾತಾವರಣ ಚಿಕ್ಕಬಳ್ಳಾಪುರದಲ್ಲಿದೆ ಅಲ್ಲಿ ನನ್ನ ಇಡೀ ರಾಜಕೀಯ ಭವಿಷ್ಯವನ್ನು, ನನ್ನ ನಂಬಿರುವ ಸಾವಿರಾರು ಸಹಚರರ ಭವಿಷ್ಯವನ್ನೆಲ್ಲ ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ ಇದು ಇತಿಹಾಸ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಮಾಡಬೇಕೆಂದು, ಅವತ್ತಿನ ಸಂದರ್ಭದಲ್ಲಿ ಸೆಲ್ಪ್ ರೆಸ್ಪೆಕ್ಟ್ ಗಾಗಿ ಹೋರಾಟ ಮಾಡಿ ಈ ಪಕ್ಷಕ್ಕೆ ಬಂದೆ.

ಅವರು ರಾಜೀನಾಮೆ ಕೊಟ್ಟ ನಂತರ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ರು. ಅವರ ಜೊತೆಗೂ ನಾನು‌ ಹೆಗಲಿಗೆ ಹೆಗಲ ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂತಿಮವಾಗಿ ನನಗೆ ಪಕ್ಷದ ತತ್ವ, ಸಿದ್ದಾಂತ, ಆದರ್ಶ ಅಷ್ಟೇ ಮುಖ್ಯ.. ಎಂಬಂತೆ ಪಕ್ಷ ಏನ್ ಸೂಚಿಸಿದೆ ಅದನ್ನ ಮಾಡ್ಕೊಂಡ್ ಬಂದಿದ್ದೇನೆ.

ಸೋಲೇ ಇಲ್ಲದೇ ಇರುವ ಚಿಕ್ಕಬಳ್ಳಾಪುರದ ವಾತಾವರಣದಲ್ಲಿ, ಪಕ್ಷದ ನೆಲೆಯೇ ಇಲ್ಲದೆ ಇರುವ ಕಡೆ ನನಗೆ ಒಂದು ಸಾರಿ ಆಘಾತ ಆಯ್ತು. ಅದಕ್ಕೆ ಅನೇಕ ಕಾರಣಗಳಿದೆ.. ಇವತ್ ಪಕ್ಷ ಕಟ್ಟುತ್ತೀನಿ ಅಂತ ಹೊರಟಿರೋರು 2023ರಲ್ಲಿ 15-20 ಜನರನ್ನ ಟಾರ್ಗೆಟ್ ಮಾಡಿ, ಯಾವರೀತಿ ಸೋಲಿಸುವ ಪ್ರಯತ್ನ ಮಾಡಿದ್ದೀರಿ. 2019ರಲ್ಲಿ ನಮ್ಮ ವಿರುದ್ಧ ಎಷ್ಟೇಲ್ಲ ಸುಳ್ಳು ಹಬ್ಬಿಸಿದ್ದರು ತಿಳಿದಿದೆ.

ಇವತ್ತು ಪಕ್ಷದಲ್ಲಿ ಸಂಘಟನಾತ್ಮಕವಾಗಿ ನೇಮಕಾತಿಗಳು ನಡೆಯುತ್ತಿವೆ. ಆಂತರಿಕ ಪ್ರಜಾಪ್ರಭುತ್ವ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು, ಸ್ವಜನ ಪಕ್ಷಪಾತಕ್ಕೆ ಮಣೆ ಹಾಕೋದಿಲ್ಲ, ವಂಶ ಪಾರಂಪರ್ಯಕ್ಕೆ ರಾಜಕಾರಣಕ್ಕೆ ಮಣೆ ಹಾಕಲ್ಲ ಎಂಬ ಸಿದ್ದಾಂತ ನಮ್ಮ ಪಕ್ಷದಲ್ಲಿ ಇದೆ ಎಂದು ನಾನು ನಂಬಿದ್ದೆ.

ಸಂತೋಷ್, ಪ್ರಹ್ಲಾದ್ ಜೋಷಿ, ಅಶೋಕ್, ಬೊಮ್ಮಾಯಿಯವರ ಆಶೀರ್ವಾದ, ಬೆಂಬಲ ಇದ್ದಿದ್ದರಿಂದ. ಒಂದು ಸೋಲು, ಆಘಾತ ಆದರೂ ಲೋಕಸಭೆ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಟಿಕೆಟ್ ನನಗೆ ಬರಬೇಕಿತ್ತು. ಪಕ್ಷಕ್ಕೆ ತನು,ಮನ,ದನ ಅರ್ಪಣೆ ಮಾಡಿ, ಪಕ್ಷಕ್ಕೆ ಅನೇಕ ಮಾಜಿ ಶಾಸಕರ ಸೇರ್ಪಡೆ ಮಾಡಿ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡ್ತಾ ಇದ್ದೀನಿ.

ಪಕ್ಷದ ಚುನಾವಣೆಗಳು ಸಂವಿಧಾನ ಪೂರಕವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡಬೇಕಾಗುತ್ತೆ, ಆದರೆ ಯಾವುದೇ ಚುನಾವಣೆಯನ್ನು ಮಾಡಿಲ್ಲ.

ಇವತ್ ಒಂದು ಗಂಟೆಗೆ ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಏಕ ಚಕ್ರಾಧಿಪತ್ಯದ ರೀತಿಯಲ್ಲಿ, ನನ್ನದು ನಡೆಯುತ್ತೆ, ತಮ್ಮ ಹಿಂದೆ ಮುಂದೆ ಓಡಾಡುವ ಯೆಸ್ ಬಾಸ್, ಜೀ ಹುಜೂರು ಅನ್ನೋರನ್ನು ನೇಮಕ ಮಾಡಿಕೊಳ್ಳೋದು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಾಗಳ ನೇಮಕ ಮಾಡಿಕೊಳ್ಳುವ ಕೆಲಸ ಆಗುತ್ತಿದೆ.

ಮಿಸ್ಟರ್ ಬಿವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದೀರಲ್ಲ ಇವರ ಧೋರಣೆ ಅನೇಕ ನಾಯಕರಿಗೆ ನೋವನ್ನು ತಂದಿದೆ. ಇವರ ದರ್ಪ, ಅಹಂಕಾರ, ಕಾರ್ಯವೈಖರಿಯಿಂದ ಯಾರನ್ನೂ ವಿಶ್ವಾಸಕ್ಕೆ ತಗೊಂಡು ಹೋಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೋ, ಅದಕ್ಕಿಂತ ಮೇಲಿದ್ದರೇನೋ ಗೊತ್ತಿಲ್ಲ, ಇವರ ಬಳಿ ಸಾವಿರಾರು ಕೋಟಿ ಇರಬಹುದೇನೋ ಗೊತ್ತಿಲ್ಲ. ಸೌಜನ್ಯಕ್ಕಾದರೂ ನನ್ನ ಜೊತೆ ವಿಜಯೇಂದ್ರ ಚರ್ಚೆ ಮಾಡಿಲ್ಲ.

ಸೋಲಿಸಲು ಹಾಲಿ ಶಾಸಕರ ಪ್ರಯತ್ನ

ಬಿಜೆಪಿ ಇಲ್ಲದ ಮರುಭೋಮಿಲಿ, ಕಾಂಗ್ರೆಸ್ ಸರ್ಕಾರದ ಅವಧಿಯ ನಡುವೆಯೂ ಉತ್ತಮ ಮತಗಳ ಅಂತರದಲ್ಲಿ ವಿಜೇತನಾದೆ..

ಇವರ ಹಿಂಬಾಲಕರು ಡಾಕ್ಟರ್ ನ ಸೋಲಿಸಬೇಕೆಂದು, ಟಿಕೆಟ್ ಯಿಂದ ಹಿಡಿದು ಚುನಾವಣೆಯಲ್ಲಿ ಏನೇ ಮಾಡಿ ಸೋಲಿಸಬೇಕು ಅಂತ ಹಾಲಿ ಶಾಸಕರು.. ಇವರ ಹಿಂಬಾಲಕರು.. ಅವರು ತಗೊಂಡಿದಕ್ಕಿಂತ ಜಾಸ್ತಿ ತಗೊಂಡೆ ಅದ್ ಬೇರೆ ವಿಚಾರ.‌ ಅದು ನಮ್ಮ ರಾಜಕೀಯ, ನಮ್ಮ ಅನುಭವ, ಜನರ ವಿಶ್ವಾಸ.

ಸೌಜನ್ಯಕ್ಕೂ ಮಾತಾಡಿಲ್ಲ, ನಾನು ಫೋನ್ ಮಾಡಿದ್ರು ರೆಸ್ಪಾಂಡ್ ಮಾಡಲ್ಲ, ಮೆಸೇಜ್ ಗೂ ರಿಪ್ಲೇ ಮಾಡಲ್ಲ. ಎರಡು ಸರಿ ಅಪಾಯಿಂಟ್ ಮೆಂಟ್ ಕೊಟ್ಟಿದ್ದು ಮುಂದಕ್ಕೆ ಹಾಕಿದ್ದಾರೆ, ಭೇಟಿಗೂ ಅವಕಾಶ ಕೊಡಲ್ಲ, ಆದರೆ ನಡ್ಡಾ ನನಗೆ ಅವಕಾಶ ಕೊಡ್ತಾರೆ. ಆರ್‌ಎಸ್ಎಸ್ ನಾಯಕರು ನಮಗೆ ಭೇಟಿಗೆ‌ ಸಮಯ ಕೊಡ್ತಾರೆ, ಸಮಾಲೋಚನೆ ಮಾಡ್ತಾರೆ.. ಅದರೆ ಇವರಲ್ಲಿ ಯಾವುದು ಇಲ್ಲ ಎಂದು ಅಸಮಧಾನ ಹೊರಹಾಕಿದರು.

ಬಿಜೆಪಿ ನಿಮ್ಮ ಸ್ವಂತ ಆಸ್ತಿನಾ? ಬನ್ನಿ ನೋಡೋಣ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸೀಟ್ ಗೆಲ್ಲಿಸಿ ನೋಡೋಣ ಎಂದು ಚಾಲೆಂಜ್ ಮಾಡ್ತೀನಿ.

ನಮ್ಮನ್ನು ತುಳಿಯೋಕೆ, ಸಮಾಧಿ ಮಾಡೋಕೆ‌ ಹೊರಟಿದ್ದೀರಾ..? ಬಿಜೆಪಿಯಲ್ಲಿರುವ ಎಲ್ಲಾ‌ ಹಿರಿಯರನ್ನು ಮುಗಿಸುವ ಕೆಲಸ ಮಾಡ್ತಿದ್ದೀರಿ. ನಾನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೆ‌ ತಂದಿದ್ದೇನೆ. ಯಾವುದೇ ಕಾರಣಕ್ಕೂ ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿರಿಯ ಸಂಸದರಾದ‌ ಗೋವಿಂದ ಕಾರಜೋಳರನ್ನು ಹೊಡೆಯಲು ಹೋದವರನ್ನು ಅಧ್ಯಕ್ಷರಾಗಿ ಮಾಡಲು ಹೊರಟಿದ್ದೀರಿ. ಸಿಟಿ ರವಿ, ಬೊಮ್ಮಾಯಿ, ಯತ್ನಾಳ್, ರಮೇಶ್ ಜಾರಕಿಹೊಳಿ ನಿಮಗೆ ಯಾವ ಹಿರಿಯ ನಾಯಕರನ್ನು ಬಿಡುತ್ತಿಲ್ಲ. ರಮೇಶ್ ಜಾರಕಿಹೊಳಿಯನ್ನು ಮುಗಿಸಿದ್ರಿ, ನನ್ನ ಸಮಧಾನ ಮಾಡುವ ಪ್ರಯತ್ನ ಮುಗಿದಿದೆ, ಇನ್ನೂ ಏನಿದ್ರು ನಿಮ್ಮ ವಿರುದ್ಧ ಯುದ್ದ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೀವು ನೇಮಕ ಮಾಡಿರೋರು ರಿಯಲ್ ಎಸ್ಟೇಟ್ ನಿಂದ ಸ್ವಲ್ಪ ದುಡ್ಡು ತಂದು ಕೊಡಬಹುದು, ಆದರೆ ಅವರಿಂದ ಪಕ್ಷ ಗೆಲ್ಲಲು ಸಾಧ್ಯವಾಗೋದಿಲ್ಲ. ನನ್ನನ್ನು ಸೋಲಿಸಲು ಕಾರಣರಾದ ಸಂದೀಪ್ ರೆಡ್ಡಿಯನ್ನು ಅಧ್ಯಕ್ಷರಾಗಿ ಮಾಡಿದ್ದೀರಿ ಎಂದು ವಿಜಯೇಂದ್ರ‌ ವಿರುದ್ಧ ಸುಧಾಕರ್ ಹಿಗ್ಗಾ ಮುಗ್ಗಾ‌ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವತ್ತೆ ಹೇಳಿದ್ರು ಬಳಸಿ ಬಿಸಾಕ್ತಾರೆ ಅಂತ. ಆದಾಗ್ಯೂ ಇವರಿಗಾಗಿ ಬಂದರೆ ನಮ್ಮನ್ನು ಈ ಸ್ಥಿತಿಗೆ ತಂದಿದ್ದಾರೆ. ಆದರೆ ಜನರ ಆಶಿರ್ವಾದ ಇದೆ. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ‌ರನ್ನು ಭೇಟಿಯಾಗುತ್ತೇನೆ. ಇವರ ಎಲ್ಲಾ ಬಂಡವಾಳವನ್ನು‌ ಅಮಿತ್ ಶಾ‌ ಬಳಿ‌ ಬಿಚ್ಚಿಡ್ತೀನಿ.

ಯಡಿಯೂರಪ್ಪ ಮತ್ತೆ ವಿಜಯೇಂದ್ರ‌ ಹೋಲಿಕೆಯೇ‌ ಬೇರೆ, ಯಡಿಯೂರಪ್ಪರ ಆದರ್ಶ ಮತ್ತೆ ಯೋಚನೆಯೇ‌ ಬೇರೆ.. ನಿಮ್ಮದು‌ ಹಠ ಮತ್ತೆ ದ್ವೇಷದ ರಾಜಕಾರಣ. ನಿಮ್ಮ ಧೋರಣೆಗೆ ನನ್ನ ಧಿಕ್ಕಾರ, ಇವರ ಅಹಂಕಾರಕ್ಕೆ ನನ್ನ ಧಿಕ್ಕಾರ, ಇವರ ಮನಸ್ಥಿತಿಗೆ ನನ್ನ ಧಿಕ್ಕಾರ, ವರಿಷ್ಠರಲ್ಲಿ ಮನವಿ ಇಷ್ಟೇ ಇವರ ಧೋರಣೆ ಬದಲಿಸುವಂತೆ ಅಥವ ಇವರನ್ನೇ ಬದಲಿಸುವಂತೆ ಮನವಿ ಮಾಡ್ತಿನಿ.

ಎಷ್ಟೆ ನೋವಾದ್ರು ಸಹಿಸಿದೆ, ನಮ್ಮ ಶಿಸ್ತನ್ನು ವೀಕ್ನೆಸ್ ಅಂದ್ಕೊಂಡ್ರು, ನಮ್ಮ ಒಳ್ಳೆತನವನ್ನ ಬಲಹೀನತೆ ಅಂದ್ಕೊಂಡ್ರೆ.. ನಮ್ ಶಕ್ತಿ ತೋರಿಸಬೇಕಾಗುತ್ತೆ ಎಂದ ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!