ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ವ್ಯವಸಾಯೋತ್ಪನ ಸಹಕಾರ ಸಂಘದ (VSSN) ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಲಾಗಿದೆ.
ಇಂದು ಕಚೇರಿ ಆವರಣದಲ್ಲಿ ಮೂರು ಪಕ್ಷಗಳ ಮುಖಂಡರ ಒಮ್ಮತದ ತೀರ್ಮಾನದಂತೆ ಕಾಂಗ್ರೆಸ್ ಬೆಂಬಲಿತ 06, ಬಿಜೆಪಿ ಬೆಂಬಲಿತ 03 ಹಾಗೂ ಜೆಡಿಎಸ್ ಬೆಂಬಲಿತ 02 ಸ್ಥಾನಗಳು ಸೇರಿ ಒಟ್ಟು 11 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
ಅವಿರೋಧ ಆಯ್ಕೆಯಾದ ನಿರ್ದೇಶಕರು
ಜಿಆರ್ ರಂಗನಾಥ್, ಎಂ ಗೋವಿಂದರಾಜು, ಟಿಎಂ ಮೋಹನ್ ಕುಮಾರ್, ಸಿದ್ದರಾಜು, ಶಾಂತಮ್ಮ, ಲಿಂಗಯ್ಯ, ಪ್ರಕಾಶ್, ಗುರುಸಿದ್ದಯ್ಯ, ರಾಜಪ್ಪ, ಯಶೋಧಮ್ಮ, ಶ್ರೀನಿವಾಸ್ ಮೂರ್ತಿ.
ನೂತನ ನಿರ್ದೇಶಕರನ್ನು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಿಸಿ ಶಶಿಧರ್, ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ, ಬಿಜೆಪಿ ಹಿರಿಯ ಮುಖಂಡ ಬಿಸಿ ನಾರಾಯಣಸ್ವಾಮಿ, ನಾಗೇಶ್ ಮತ್ತಿತರರು ಶುಭಕೋರಿದರು.