ರಾಯಚೂರು: ಕ್ರೂಷರ್‌ವಾಹನದ ಟೈರ್‌ಬ್ಲಾಸ್ಟ್ (Accident) ಆದ ಪರಿಣಾಮ ಚಾಲಕ ಸೇರಿ ಮಂತ್ರಾಲಯದ ಮಠದ ಸಾಂಸ್ಕೃತಿಕ ವಿದ್ಯಾಪೀಠದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಧಾರುಣ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹರಗಿನಮರ ಕ್ಯಾಂಪ್ ಸಮೀಪ ಈ ದುರ್ಘಟನೆ ನಡೆದಿದೆ.
ವಾಹನ ಚಾಲಕ ಶಿವು, ಮಂತ್ರಾಲಯದ ಸಂಸ್ಕೃತ ವಿದ್ಯಾ ಪೀಠದ ವಿದ್ಯಾರ್ಥಿಗಳಾದ ಹೈವಧನ ಕಟ್ಟಿ, ಸುಜಯೀಂದ್ರ, ಅಭಿಲಾಶ ಮೃತ ವಿದ್ಯಾರ್ಥಿಗಳು.
ಘಟನೆಯಲ್ಲಿ ವಿದ್ಯಾರ್ಥಿ ಜಯಸಿಂಹ ಸ್ಥಿತಿ ಚಿಂತಾಜನಕವಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ನವವೃಂದಾವನ ಗಡ್ಡೆಯಲ್ಲಿರುವ ಶ್ರೀಹರಿ ಹರ ತೀರ್ಥರ ಉತ್ತರಾರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಸಂಚಾಲಿತ ಶ್ರೀಗುರುಸಾರ್ವಭೌಮ ವಿದ್ಯಾಪೀಠದಿಂದ 5 ಕ್ರೂಷರ್ ವಾಹನಗಳಲ್ಲಿ ವಿದ್ಯಾರ್ಥಿಗಳು ತೆರಳುತ್ತಿದ್ದರು.
ಕ್ರೂಷರ್ ವಾಹನದ ಮುಂದಿನ ಟೈರ್ ಸ್ಫೋಟಿಸಿ ಈ ಅಪಘಾತ ಸಂಭವಿಸಿದೆ.