ಬಾಗಲಕೋಟೆ: ಹೃದಯಾಘಾತ (Heart attack) ಉಂಟಾದ ಪರಿಣಾಮ ರಾಜಾಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದ ಕರ್ನಾಟಕದ ವೀರ ಯೋಧ ಸಾವನ್ನಪ್ಪಿದ್ದಾರೆ.
ಮೃತ ಯೋಧರನ್ನು ಮಾಗೊಂಡಯ್ಯ ಚನ್ನಯ್ಯ ರೇಷ್ಮೆ ಎಂದು ಗುರುತಿಸಲಾಗಿದೆ. ಅವರಿಗೆ 37 ವರ್ಷ ವಯಸ್ಸಾಗಿತ್ತು.
ಮೃತ ಯೋಧ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಯೋಧ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ಮೃತ ಮೃತಪಟ್ಟಿದ್ದಾರೆ.
ಮಾಗೊಂಡಯ್ಯ ಕಳೆದ 14 ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗಾವಿ ಮರಾಠಾ ಇನ್‌ಫೆಂಟ್ರಿ ಯುನಿಟ್ ಬಿಕಾನರ್ ಕಾಂಟ್ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತ್ನಿ ಹಾಗೂ ಮಕ್ಕಳೊಂದಿಗೆ ಯೋಧ ರಾಜಸ್ಥಾನದಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ.15ರಂದು ನಂದಿಕೇಶ್ವರ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಿದೆ.