ಹಾಸನ; ಪ್ರಿಯತಮೆಯ ಕಾಟಕ್ಕೆ ಬೇಸತ್ತ ಪ್ರೇಮಿಯೋರ್ವ ಸೆಲ್ಪಿ ವಿಡಿಯೋ ಮಾಡಿ, ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾಳೆಗದ್ದೆಯಲ್ಲಿ ನಡೆದಿದೆ.
ಪವನ (30) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಪವನ, ತನ್ನ ಸಾವಿಗೆ ಪ್ರಿಯತಮೆಯೇ ಕಾರಣ ಎಂದು ಹೇಳಿದ್ದಾನೆ.
ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ವಿಡಿಯೋದಲ್ಲಿ 2021ರಲ್ಲಿ ನನ್ನ ಮನೆಯ ಬಳಿ ಯುವತಿ ವಾಸಿಸುತ್ತಿದ್ದಳು. ಆಗ ನನ್ನ ಲೈಫ್‌ನಲ್ಲಿ ಅವಳು ಬಂದು ಇಬ್ಬರು ಪರಸ್ಪರ ಪ್ರೀತಿಸುತಿದ್ದೆವು. ನೀನು ನನಗೆ ಬೇಕೇ ಬೇಕು ಅಂತ ಹಠ ಹಿಡಿದಿದ್ದಳು. ಅನಂತರ ಅವಳ ನಡವಳಿಕೆ ಕಂಡು ನಾನು ದೂರವಾದೆ.
2024ರಲ್ಲಿ ನನ್ನ ವಿರುದ್ಧ ಪೊಲೀಸರಿಗೆ ಆಕೆ ದೂರು ನೀಡಿದ್ದಾಳೆ. ಹುಡುಗಿಯರು ಏನೇ ಮಾಡಿದರು ಲೆಕ್ಕಕ್ಕೆ ಬರುವುದಿಲ್ಲ ಎಂದು ಯುವತಿಯ ವಿರುದ್ಧ ಆರೋಪಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಸಕಲೇಶಪುರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.