Isro: ಅಂತರಿಕ್ಷದಲ್ಲಿ ಅಲಸಂದೆ ಮೊಳಕೆ..!; ಬೆಳವಣಿಗೆಯ Video ಬಿಡುಗಡೆ ಮಾಡಿದ ಇಸ್ರೋ

ದೆಹಲಿ: ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Isro) ಕೈಗೊಂಡ ಪ್ರಯೋಗ ಮೊದಲ ಯತ್ನದಲ್ಲೇ ಯಶಸ್ವಿಯಾಗಿದೆ.

‘ಇಸ್ರೋ’ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿದ್ದ ಅಲಸಂದೆ ಬೀಜಗಳು ಮೊಳಕೆಯೊಡೆದಿದ್ದು, ಎಲೆಗಳನ್ನು ಬಿಟ್ಟಿವೆ.

‘ಇಸ್ರೋ’ ತನ್ನ ಅಧಿಕೃತ ‘ಟ್ವಿಟರ್’ ಖಾತೆಯಲ್ಲಿ ಮಂಗಳವಾರ ವಿಡಿಯೋ ಮತ್ತು ಮಾಹಿತಿ ಹಂಚಿಕೊಂಡು ಸಂಭ್ರಮಿಸಿದೆ.

ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡಲಾಗಿದ್ದ ಅಲಸಂದೆ ಬೀಜಗಳು ಬಾಹ್ಯಾಕಾಶ ಸೇರಿದ 4 ದಿನಗಳಲ್ಲೇ ಮೊಳಕೆ ಬಂದಿವೆ ಎಂದು ಇಸ್ರೋ ಹೇಳಿದೆ.

“ಬಾಹ್ಯಾಕಾಶದಲ್ಲಿ ಡಾಕಿಂಗ್‌ಗಾಗಿ ಜೋಡಿ ಉಪಗ್ರಹಗಳನ್ನು ಹೊತ್ತು ಮಂಗಳವಾರ ಉಡಾವಣೆಗೊಂಡ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನಲ್ಲಿಯೇ ಅಲಸಂದೆ ಬೀಜಗಳು ಸೇರಿದಂತೆ ಅಂತರಿಕ್ಷದಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಇರಿಸಲಾಗಿತ್ತು.

ಈ ಘಟಕ ಇನ್ನೂ 3-4 ದಿನ ಕಾರ್ಯನಿರ್ವಹಿಸಲಿದೆ. ಬಾಹ್ಯಾಕಾಶದಲ್ಲಿ ಸಸ್ಯ ಬೆಳವಣಿಗೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ’ ಎಂದು ಇಸ್ರೋ ಹೇಳಿದೆ.

ಡಿ.30ರ ರಾತ್ರಿಯಷ್ಟೇ ಪಿಎಸ್‌ಎಲ್‌ವಿ-ಸಿ60 ರಾಕೆಟ್ ಅವಳಿ ಉಪಗ್ರಹಗಳನ್ನು ಭೂಮಿಯಿಂದ 350 ಕಿಮೀ ಎತ್ತರದ ಆಕಾಶಕ್ಕೆ ಯಶಸ್ವಿಯಾಗಿ ಕೊಂಡೊಯ್ದು ತಲುಪಿಸಿದ ಉಡ್ಡಯನ ಕಾರ್ಯಾಚರಣೆಯ ಭಾಗವಾಗಿಯೇ ಈ ‘ಕ್ರಾಪ್ಸ್’ ಪ್ರಯೋಗ ವನ್ನೂ ನಡೆಸಲಾಗಿದೆ.

https://twitter.com/isro/status/1876527330807738550?t=NZPm0rO2tOaIimFsIXp2Xw&s=19

8 ಅಲಸಂದೆ ಬೀಜಗಳು, ಅವು ಮೊಳಕೆಯೊಡೆಯಲು ಬೇಕಾದ ಪರಿಕರಗಳು ಎಲ್ಲವನ್ನು ಒಳಗೊಂಡ ‘ಪಿಒಇಎಂ-4’ ಪ್ಲಾಟ್‌ಫಾರ್ಮ್ ಪಿಎಸ್‌ಎಲ್‌ವಿ-ಸಿ60 ರಾಕೆಟ್‌ನ 4ನೇ ಹಂತದಲ್ಲಿತ್ತು.

ಇದಕ್ಕೂ ಮುನ್ನ ಚೀನಾ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜಲಚರಗಳನ್ನು ಬೆಳೆಸುವ ಪ್ರಯೋಗ ನಡೆಸಿ ಯಶಸ್ಸು ಕಂಡಿದೆ.

ಜೆಲ್ಲಿ ಫಿಶ್‌ ಗಳನ್ನು ಶೂನ್ಯ ಗುರುತ್ವಾಕರ್ಷಣ ವಲಯದಲ್ಲಿ ಬೆಳೆಸುತ್ತಿರುವ ಚೀನಾ, ಅಂತರಿಕ್ಷದಲ್ಲಿ ಮಾನವನಿಗೆ ಹೊರತಾದ ಜೀವಿಗಳ ಇರುವಿಕೆ ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದೆ.

ರಾಜಕೀಯ

Doddaballapura: ದೊಡ್ಡಬಳ್ಳಾಪುರಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ

Doddaballapura: ದೊಡ್ಡಬಳ್ಳಾಪುರಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ

ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಗಳಿಂದ, ನಾಡಿನ ಜನತೆ ನೆಮ್ಮದಿಯಿಂದ ಊಟ ಮಾಡುವಂತಾಗಿದೆ. Doddaballapura

[ccc_my_favorite_select_button post_id="100532"]
Doddaballapura: ಜ.11ರಂದು ದಿ.ಹೆಚ್.ಅಪ್ಪಯ್ಯಣ್ಣ ನುಡಿ ನಮನ: ಬಿ.ಮುನೇಗೌಡ ಆಹ್ವಾನ

Doddaballapura: ಜ.11ರಂದು ದಿ.ಹೆಚ್.ಅಪ್ಪಯ್ಯಣ್ಣ ನುಡಿ ನಮನ: ಬಿ.ಮುನೇಗೌಡ ಆಹ್ವಾನ

ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣನವರು Doddaballapura

[ccc_my_favorite_select_button post_id="100537"]
Tirupati| ತಿರುಪತಿಯಲ್ಲಿ ಘನ ಘೋರ ದುರಂತ; ಕರ್ನಾಟಕ ಮೂಲದ ಮಹಿಳೆ ಸಾವು..! Video

Tirupati| ತಿರುಪತಿಯಲ್ಲಿ ಘನ ಘೋರ ದುರಂತ; ಕರ್ನಾಟಕ ಮೂಲದ ಮಹಿಳೆ ಸಾವು..! Video

ಏಕಾಏಕಿ ಸಾವಿರಾರು ಮಂದಿ ನುಗ್ಗಿದ ಪರಿಣಾಮ ಕಾಲ್ತುಳಿತ ಸಂಭವಿಸಿ 6 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ tirupati

[ccc_my_favorite_select_button post_id="100515"]
California; ಭೀಕರ ಕಾಡ್ಗಿಚ್ಚು: ಮನೆ, ವಾಹನ ಭಸ್ಮ..!| Video ನೋಡಿ

California; ಭೀಕರ ಕಾಡ್ಗಿಚ್ಚು: ಮನೆ, ವಾಹನ ಭಸ್ಮ..!| Video ನೋಡಿ

Pacific Palisade fire made Southern California look like an absolute Horror movie. Everyone is FORCED to evacuate, They are out of Water, Fighter Fighters, The wind is so strong that Tunker

[ccc_my_favorite_select_button post_id="100450"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
Murder: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

Murder: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆರೋಪಿ ಗಂಗರಾಜುವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. Murder

[ccc_my_favorite_select_button post_id="100474"]
Accident: ಓಂ ಶಕ್ತಿ ದರ್ಶನ ಮುಗಿಸಿ ಬರುವ ವೇಳೆ ಭೀಕರ ಅಪಘಾತ.. 4 ಸಾವು..!

Accident: ಓಂ ಶಕ್ತಿ ದರ್ಶನ ಮುಗಿಸಿ ಬರುವ ವೇಳೆ ಭೀಕರ ಅಪಘಾತ.. 4

ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. Accident

[ccc_my_favorite_select_button post_id="100523"]

ಆರೋಗ್ಯ

ಸಿನಿಮಾ

Doctorate: ಖ್ಯಾತ ನಟಿ ತಾರಾ ಸೇರಿ 3 ಮಂದಿಗೆ ಡಾಕ್ಟರೇಟ್ ಗೌರವ..!

Doctorate: ಖ್ಯಾತ ನಟಿ ತಾರಾ ಸೇರಿ 3 ಮಂದಿಗೆ ಡಾಕ್ಟರೇಟ್ ಗೌರವ..!

ಸಿನಿಮಾ ಕ್ಷೇತ್ರದ ಸಾಧನೆಗಾಗಿ ತಾರಾ ಅವರಿಗೆ ವಿವಿಯ ಕುಲಾಧಿಪತಿ Doctorate

[ccc_my_favorite_select_button post_id="100512"]
error: Content is protected !!